![]() |
| ಜಾಸ್ವಿನ್ ಡಿಸೋಜ |
ಶಿರ್ವ : ಇಲ್ಲಿನ ಮುದರಂಗಡಿ ಪೇಟೆಯ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟಿದ್ದಾರೆ. ಮುದರಂಗಡಿ ಅಗರ್ ದಂಡೆ ನಿವಾಸಿ ಜಾಸ್ವಿನ್ ಡಿಸೋಜ (23) ಮೃತಪಟ್ಟ ದುರ್ದೈವಿ.
ಜಾಸ್ವಿನ್ ಅವರು ತಡರಾತ್ರಿವರೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಾಪಸ್ ಮನೆಗೆ ಮರಳುತ್ತಿದ್ದಾಗ, ಮುದರಂಗಡಿ ಪೇಟೆ ಸಮೀಪದ ರಸ್ತೆ ಪಕ್ಕದಲ್ಲಿದ್ದ ಡಿವೈಡರ್‌ಗೆ ಸ್ಕೂಟರ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಜಾಸ್ವಿನ್ ಅವರು ತೀವ್ರವಾಗಿ ಗಾಯಗೊಂಡಿದ್ದು, ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಅವರನ್ನು ಮಣಿಪಾಲಿನ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಯಿತು. ಆದರೆ ದಾರಿ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
