
ಉಡುಪಿ:AKMS ಸೈಫ್ ಕೊಲೆ ಪ್ರಕರಣ- ರಿಧಾ ಶಭನಾ ಅರೆಸ್ಟ್
04/10/2025 01:25 PM
ಉಡುಪಿ: ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 108/25 ಕಲಂ. 103, 3(5) ಬಿಎನ್ಎಸ್ ರಂತೆ ದಾಖಲಾದ ಎಕೆಎಂಎಸ್ ಸೈಫುದ್ದೀನ್ ಕೊಲೆ ಪ್ರಕರಣಕ್ಕೆ ಸಂಬಧಿಸಿದಂತೆ ಕೊಲೆಗೆ ಒಳಸಂಚು ರೂಪಿಸಿ ಕೃತ್ಯದಲ್ಲಿ ಭಾಗಿಯಾದ ನಾಲ್ಕನೇ ಆರೋಪಿ ರಿಧಾ ಶಭನಾ(27), ಗಂಡ : ಮೊಹಮ್ಮದ್ ಫೈಜಲ್ ಖಾನ್, ಸಿ ಗೇಟ್ ಅಪಾರ್ಟ್ ಮೆಂಟ್, ಮೆಷಿನ್ ಕಂಪೌಂಡ್ ಹತ್ತಿರ, ಬಡಗುಬೆಟ್ಟು, ಉಡುಪಿ ಇವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.