ಉಡುಪಿ:ಲಾಡ್ಜ್ ನಲ್ಲಿ ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲೇ ವ್ಯಕ್ತಿ ಸಾವು !




ಉಡುಪಿ: ನಗರದ ಹಳೆ ಸರಕಾರಿ ಬಸ್ಸು ನಿಲ್ದಾಣದ ಬಳಿ ಇರುವ ವಸತಿಗೃಹದಲ್ಲಿ ಯಾತ್ರಾರ್ಥಿಯೊಬ್ಬರು ಕುಳಿತ ಕುರ್ಚಿಯಲ್ಲಿಯೇ ಸಾವನಪ್ಪಿರುವ ಘಟನೆ‌ ನಡೆದಿದೆ.‌ ವ್ಯಕ್ತಿಯು ಕೊಠಡಿಯಿಂದ  ಹೊರಬಾರದಿರವುದನ್ನು ಗಮನಿಸಿದ ಲಾಡ್ಜಿನ ಸಿಬ್ಬಂದಿ ‌ಸಂಶಯಪಟ್ಟು ಬಾಗಿಲು‌ ತೆರೆದು‌ ನೋಡಿದಾಗ ವ್ಯಕ್ತಿ ಮೃತಪಟ್ಟಿರುವುದು ಕಂಡುಬಂದಿದೆ. ಮೃತ ವ್ಯಕ್ತಿಯನ್ನು ದಾವಣಗೆರೆಯ ನಿವಾಸಿ ಮಹಾಂತೇಶ ಎಂ ಜಿ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಮನೆಯಲ್ಲಿ , ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ  ಹೋಗುವುದಾಗಿ ಹೇಳಿ ಬಂದಿದ್ದರೆಂದು  ತಿಳಿದುಬಂದಿದೆ.

ನಗರ ಪೋಲಿಸ್ ಠಾಣೆಯ ಎಸ್ ಐ ನಾರಾಯಣ, ಎ ಎಸ್ ಐ ಹರೀಶ್, ಹೆಡ್ ಕಾನ್ ಸ್ಟೇಬಲ್ ಆಶಾಲತಾ ಕಾನೂನು ಪ್ರಕ್ರಿಯೆಯನ್ನು‌ ಮೃತನ ಹೆಂಡತಿ, ಹಾಗೂ ಅಣ್ಣನ ಸಮಕ್ಷಮದಲ್ಲಿ ನಡೆಸಿದರು. ಸಮಾಜಸೇವಕ ನಿತ್ಯಾನಂದ‌ ಒಳಕಾಡು ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ನೆರವಾದರು.ಸಾವಿಗೆ ಸ್ವಷ್ಟ ಕಾರಣ ತಿಳಿದುಬಂದಿಲ್ಲ.ಅನಾರೋಗ್ಯದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.