ಮಟಪಾಡಿ ಶ್ರೀ ನಿಕೇತನ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆ ವಾರ್ಷಿಕೋತ್ಸವ ಸಂಭ್ರಮ



ಬ್ರಹ್ಮಾವರ: ಶ್ರೀ ನಿಕೇತನ ಹಿರಿಯ ಪ್ರಾಥಮಿಕ ಶಾಲೆಯ ಹಾಗೂ ಪ್ರೌಢ ಶಾಲೆ ಮಟಪಾಡಿ ಇವುಗಳ ಜಂಟಿ ವಾರ್ಷಿಕೋತ್ಸವ  ವಿಜೃಂಭಣೆಯಿಂದ ಜರುಗಿತು.
ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆನರಾ ಬ್ಯಾಂಕ್ ಇದರ ನಿವೃತ್ತ ಮ್ಯಾನೇಜರ್ ಗೋಪಾಲ ಗಾಣಿಗ ಮಟಪಾಡಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಿಎಸ್ ಎನ್ ಎಲ್  ಇದರ ನಿವೃತ್ತ ಮಹಾಪ್ರಭಂದಕರಾದ ಚಂದ್ರಶೇಖರ ಕಲ್ಕೂರ ಮಟಪಾಡಿ ಇವರಿಗೆ ಶಾಲೆಯ ಪರವಾಗಿ ಗೌರವಾರ್ಪಣೆ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮಾ ಪಿ, ಜನನಿ ಎಂಟರ್ ಪ್ರೈಸಸ್ ಇದರ ಆಳಿತ ಪಾಲುದಾರರಾದ ಪ್ರಶಾಂತ್ ಕಾಡೂರು, ಶ್ರೀಕ್ಷೇತ್ರ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬ್ರಹ್ಮಾವರ ಇದರ ಯೋಜನಾಧಿಕಾರಿ ರಮೇಶ್  ಪಿ ಕೆ, ಭಾಗವಹಿಸಿದ್ದರು.
ವಿಜಯ ಸೇವಾ ಪ್ರತಿಷ್ಠಾನ ಮಟಪಾಡಿ ಟ್ರಸ್ಟಿ ಜಯರಾಮ ನಾಯರಿ ಅವರಿಗೆ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. 
ಪಬ್ಲಿಕ್ ಟಿವಿ ಉಡುಪಿ ಜಿಲ್ಲಾ ಛಾಯಾಗ್ರಾಹಕ ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಚೇತನ್ ಜಿ. ಪೂಜಾರಿ ಸ್ವಸ್ತಿ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ವಿಜಯ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಗಿರೀಶ್ ಚಂದ್ರ ಆಚಾರ್ಯ, ಶ್ರೀ ವಾಣಿ ವಿದ್ಯಾಭಿವೃದ್ಧಿ ಸಂಘ ನಡೂರು ಅಧ್ಯಕ್ಷರಾದ ಬಿ. ಭೋಜ ಹೆಗ್ಡೆ,  ಶ್ರೀನಿಕೇತನ ಶಾಲಾಭಿವೃದ್ಧಿ  ಟ್ರಸ್ಟ್ ಮಟಪಾಡಿ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ, ಹಿರಿಯಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ಶಿವರಾಮ ಶೆಟ್ಟಿ, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯನಿ ಶ್ಯಾಮಲ, ವಿದ್ಯಾರ್ಥಿ ನಾಯಕರಾದ ಶಶಾಂಕ್ ಉಪಸ್ಥಿತರಿದ್ದರು. 
ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯನಿ ಶ್ಯಾಮಲ ವರದಿ ಮಂಡಿಸಿದರು.  ಸನ್ಮಾನ ಪತ್ರವನ್ನು ದಿವ್ಯಾ, ಮತ್ತು ಸ್ನೇಹ ವಾಚಿಸಿದರು , ಬಹುಮಾನ ವಿಜೇತರ ಪಟ್ಟಿಯನ್ನು ಪವಿತ್ರ, ರಜನಿ, ಜಯಲಕ್ಷ್ಮೀ, ಆಶಾ, ಸುಕನ್ಯಾ ವಾಚಿಸಿದರು.
ಶಿವರಾಮ ಶೆಟ್ಟಿ ಸ್ವಾಗತಿಸಿ, ರತಿ  ಧನ್ಯವಾದ ಸಲ್ಲಿಸಿದರು. ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.