![]() |
| ಸಾಂದರ್ಭಿಕ ಚಿತ್ರ |
ಉಡುಪಿ: ಹೊಸ ವರ್ಷದ ವಾಟ್ಸ್ಆ್ಯಪ್ ಸ್ಕ್ಯಾಮ್‌ಗಳ ಬಗ್ಗೆ ಎಚ್ಚರಿಕೆ ವಹಿಸಿ. ಎಪಿಕೆ ಶುಭಾಶಯ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.
ಶುಭಾಶಯ ಸಂದೇಶದ ಲಿಂಕ್ ಮೇಲೆ ಕ್ಲಿಕ್ ಮಾಡಿದ ಕೂಡಲೇ ಎಸಿಕೆ ಇನ್‌ಸ್ಟಾಲ್ ಕೇಳುತ್ತದೆ. ಒಮ್ಮೆ ಇನ್‌ಸ್ಟಾಲ್ ಮಾಡಿದ ನಂತರ, ಸೈಬರ್ ವಂಚಕರು ನಿಮ್ಮ ಫೋಟೋಗಳು, ಸಂಪರ್ಕಗಳು, ಒಟಿಪಿ, ಬ್ಯಾಂಕ್ ಮಾಹಿತಿ ಸೇರಿ ಎಲ್ಲ ಡೇಟಾಗಳನ್ನು ಕಳುವು ಮಾಡುತ್ತಾರೆ. ಆದ್ದರಿಂದ ಲಿಂಕ್‌ಗಳಿಂದ ಎಪಿಕೆಗಳನ್ನು ಇನ್‌ಸ್ಟಾಲ್ ಮಾಡಬೇಡಿ. ಅಧಿಕೃತ ಅಪ್ಲಿಕೇಶನ್ ಸ್ಟೋರ್‌ಗಳನ್ನು ಬಳಸಿ. ಕ್ಲಿಕ್ ಮಾಡುವ ಮೊದಲು ಕಳುಹಿಸುವ ವ್ಯಕ್ತಿಗಳ ಬಗ್ಗೆ ಪರಿಶೀಲಿಸಿ. ಸಂದೇಹವಿದ್ದರೆ, ಕ್ಲಿಕ್ ಮಾಡಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.
" ಹೊಸ ವರ್ಷದ ಸಂದರ್ಭದಲ್ಲಿ ವಾಟ್ಸ್ಆ್ಯಪ್ ಹಾಗೂ ನಿಮ್ಮ ಸಾಮಾಜಿಕ ಜಾಲತಾಣದ ಮೂಲಕ ಬರುವ ಸಂದೇಶಗಳ ಬಗ್ಗೆ ಎಚ್ಚರಿಕೆ ವಹಿಸಿ. ಅವು ನಕಲಿ ಸಂದೇಶ ಆಗಿರಬಹುದು.ಯಾವುದೇ ಸಂದೇಹಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ " ಎಂದು ಡಿಜಿಪಿ ಡಾ .ಎಂ.ಎ ಸಲೀಂ ಮನವಿ ಮಾಡಿದ್ದಾರೆ.
