ನೂರ್-ಉಲ್-ಫುರ್ಖಾನ್ ವಿಶೇಷ ಮಕ್ಕಳ ಶಾಲೆಗೆ ಲಯನ್ಸ್ ಕ್ಲಬ್ ( ಪ್ರಕೃತಿ ) ಉಡುಪಿ ತಂಡದ ವಿಶೇಷ ಭೇಟಿ



ಉಡುಪಿ: ಸಂತೆಕಟ್ಟೆಯ ನೇಜಾರಿನಲ್ಲಿರುವ ನೂರ್-ಉಲ್-ಫುರ್ಖಾನ್ ವಿಶೇಷ ಮಕ್ಕಳ ಶಾಲೆಗೆ ಬುಧವಾರ ಲಯನ್ಸ್ ಕ್ಲಬ್ (ಪ್ರಕೃತಿ ) ಉಡುಪಿ ತಂಡ ಭೇಟಿ ನೀಡಿತು.



​ಈ ವೇಳೆ ತಂಡದ ವತಿಯಿಂದ ನೂರ್-ಉಲ್-ಫುರ್ಖಾನ್ ವಿಶೇಷ ಮಕ್ಕಳ ಶಾಲೆಗೆ ಎರಡು ದಿವಸಕ್ಕೆ ಬೇಕಾದ ಊಟದ ಖರ್ಚು ಹಾಗೂ ಹಣ್ಣು-ಹಂಪಲು ನೀಡಲಾಯಿತು. ಕಾರ್ಯಕ್ರಮದ ಸಂಪೂರ್ಣ ಖರ್ಚನ್ನು ಭರಿಸಿದ ಲಯನ್ ಸುಧಾಕರ್ ಶೆಟ್ಟಿ ಹಾಗೂ ಇನ್ನಿತರ ಪದಾಧಿಕಾರಿಗಳಿಗೆ ಶಾಲೆಯ ಸಂಸ್ಥಾಪಕಿ ಹಾಗೂ ಮುಖ್ಯ ಶಿಕ್ಷಕಿಯಾದ ದಿಲ್ಶಾದ್ ಫಝಲುರ್ ರಹಮಾನ್ ರವರು ಕೃತಜ್ಞತೆಯನ್ನು ಸಲ್ಲಿಸಿದರು ಹಾಗೂ ಎಲ್ಲರನ್ನು ಸ್ವಾಗತಿಸಿದರು.



​ಲಯನ್ಸ್ ಕ್ಲಬ್ ಪ್ರಕೃತಿ ಉಡುಪಿಯ ಅಧ್ಯಕ್ಷರಾದ ಬಿ. ಗಿರೀಶ್ ಐತಾಳ್, ಖಜಾಂಚಿಯಾದ ಭಾಸ್ಕರ್ ಶೆಟ್ಟಿಗಾರ್, ಸೆಕ್ರೆಟರಿ ಅನಂತ್ ನಾಯಕ್, ಹಾಗೂ ಜಿಲ್ಲಾ ಕೋ-ಆರ್ಡಿನೇಟರ್ ಶೇಖರ್ ಡಿ. ಶೆಟ್ಟಿ, ಮುಖ್ಯ ಅತಿಥಿಯಾಗಿ ನ್ಯಾಯವಾದಿ ಮೊಹಮ್ಮದ್ ಸುಹಾನ್ ಹಾಗೂ ಇತರ ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು.