ಕುಂದಾಪುರ: ಸಯ್ಯಿದ್ ಕುಟುಂಬದ ಕಣ್ಮಣಿ ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ಕೋಟೇಶ್ವರ ತಂಙಳ್ ರವರ ನೇತೃತ್ವದಲ್ಲಿ ನಡೆಯಲಿರುವ ಹುಬ್ಬುರ್ರಸೂಲ್ ಕ್ರಿಸ್ಟಲ್ ಜುಬಿಲಿ ಬೃಹತ್ ಬುರ್ದಾ ಕಾನ್ಫರೆನ್ಸ್ ಇದೇ ಬರುವ 2025 ಡಿಸೆಂಬರ್ 27 ಶನಿವಾರ ಸಂಜೆ 6:00ಕ್ಕೆ ಐಬಿಟಿ ಗಾರ್ಡನ್ ಮೂಡುಗೋಪಾಡಿ ಕುಂದಾಪುರದಲ್ಲಿ ನಡೆಯಲಿದೆ.
ಪ್ರಸ್ತುತ ಕಾರ್ಯಕ್ರಮದಲ್ಲಿ ಈ ವರ್ಷದ ಹುಬ್ಬುರ್ರಸೂಲ್ ಇಮಾಂ ಬೂಸೀರಿ ಅವಾರ್ಡ್ ಸಮಸ್ತ ಕೇರಳ ಮುಶಾವರ ಅಧ್ಯಕ್ಷರಾದ ರಈಸುಲ್ ಉಲಮಾ ಇ. ಸುಲೈಮಾನ್ ಮುಸ್ಲಿಯಾರ್ ಉಸ್ತಾದರಿಗೆ ನೀಡಲಾಗುವುದು ಎಂದು ಐಬಿಟಿ ಗಾರ್ಡನ್ ಚೇರ್ಮನ್ ರಾದ ಸಯ್ಯಿದ್ ಜಾಫರ್ ಅಸ್ಸಖಾಫ್ ಕೋಟೇಶ್ವರ ತಂಙಳ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಬದರುಸ್ಸಾದಾತ್ ಸಯ್ಯಿದ್ ಇಬ್ರಾಹೀಂ ಖಲೀಲ್ ಅಲ್-ಬುಖಾರಿ ಕಡಲುಂಡಿ, ಸಯ್ಯಿದ್ ಆಟಕೋಯ ತಂಙಳ್ ಕುಂಬೋಳ್, ಸಯ್ಯಿದ್ ಇಂಬಿಚ್ಚಿಕೋಯ ತಂಙಳ್ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಸಯ್ಯಿದ್ ಅಬ್ದುರ್ರಹ್ಮಾನ್ VPA ತಂಙಳ್ ಆಟೀರಿ, ಸಯ್ಯಿದ್ ಶಹೀದುದ್ದೀನ್ ಅಲ್-ಬುಖಾರಿ ಶಿವಮೊಗ್ಗ, ಸಯ್ಯಿದ್ ಅಲವೀ ಅಲ್-ಬುಖಾರಿ ಕರ್ಕಿ, ಸಯ್ಯಿದ್ ಜುನೈದ್ ಅರ್ರಿಫಾಯೀ ತಂಙಳ್ ರಂಗಿನಕೆರೆ, ಅಬ್ದುಲ್ಲಾ ಅಹ್ಸನಿ ಚೆಂಗಾಣಿ, ಡಾ. ಫಾಝಿಲ್ ರಝ್ವೀ ಕಾವಲ್ ಕಟ್ಟೆ ಹಝ್ರತ್, ಡಾ. MSM ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ರಫೀಕ್ ಸಅದಿ ದೇಲಂಪಾಡಿ, ಅಲ್ ಹಾಜ್ ಸಲೀಂ ಮದನಿ ಎಲ್ಲೂರು, ಇನ್ನಿತರ ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ.
ಬುರ್ದಾ ಹಾಫಿಝ್ ಮುಬಶ್ಶಿರ್ ಅದನಿ ಪೆರಿನ್ಡಾಟಿರಿ ಮತ್ತು ಸಂಘ ಹಾಗೂ ನಅತೇ ಶರೀಫ್ ಝಾಕಿರ್ ಅಹ್ಮದ್ ಕಶ್ಮೀರ್, ರಹೀಸ್ ಅಹ್ಮದ್ ಕಶ್ಮೀರ್ , ಶಿಯಾನ್ ಖಯ್ಯೂಮ್ ಕಶ್ಮೀರ್ ಮುಂತಾದವರುಗಳು ಆಲಾಪನೆ ಮಾಡಲಿದ್ದಾರೆ ಎಂದು ಸಯ್ಯಿದ್ ಜಾಫರ್ ಅಸ್ಸಖಾಫ್ ಕೋಟೇಶ್ವರ ತಂಙಳ್ ರವರು ಹೇಳಿದರು.
