ಉಡುಪಿ:ಖ್ಯಾತ ರಂಗೋಲಿ ಕಲಾವಿದೆ ಭಾರತಿ ಮರವಂತೆ ಅವರಿಗೆ ರಾಷ್ಟ್ರೀಯ ದೃಶ್ಯ ಕಲಾ ಅಕಾಡೆಮಿ ಧಾರವಾಡದಿಂದ ರಾಜ್ಯೋತ್ಸವ ಪ್ರಶಸ್ತಿ

 


ಉಡುಪಿ: ಖ್ಯಾತ ರಂಗೋಲಿ ಕಲಾವಿದೆ, ಸಂಶೋಧಕಿ ಡಾ.ಭಾರತಿ ಮರವಂತೆಯವರಿಗೆ ಕಲಾಕ್ಷೇತ್ರದ  ಕೆಲಸಕ್ಕಾಗಿ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ರಾಷ್ಟ್ರೀಯ ದೃಶ್ಯ ಕಲಾ ಅಕಾಡೆಮಿ ಧಾರವಾಡ ಇವರು 20 ನೇ ವಾರ್ಷಿಕೋತ್ಸವದ ಅಂಗವಾಗಿ  ದಿನಾಂಕ 31-12-2025 ರಂದು ಧಾರವಾಡದ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್ ಹಾಲಭಾವಿ ಧಾರವಾಡದಲ್ಲಿ ಹಿರಿಯ ಕಲಾವಿದರು ಮತ್ತ ಗಣ್ಯರಿರುವ ವೇದಿಕೆಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದ್ದಾರೆ.