ಕಾಪು: ಡಿ. 26, 27,28 ಕಾಪು ಲೈಟ್ ಹೌಸ್ ಕಡಲ ತೀರದಲ್ಲಿ "ಕಡಲಪರ್ಬ "



ಕಾಪು: ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ದಿ ಪ್ರಯುಕ್ತ ಕಾಪು ಮಂಡಲ ಬಿಜೆಪಿ ವತಿಯಿಂದ ಡಿ. 26, 27 ಮತ್ತು 28ರಂದು ಕಾಪು ಲೈಟ್ ಹೌಸ್ ಕಡಲ ತೀರದಲ್ಲಿ ಕಾಪು ಕಡಲಪರ್ಬವನ್ನು ಆಯೋಜಿಸಲಾಗಿದೆ.

ಈ ಕಡಲಪರ್ಬದ ನೇತೃತ್ವ ವಹಿಸಿರುವ ಶಾಸಕ ಗುರ್ಮೆ ಅವರು ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು. 26ರಂದು ಸಂಜೆ 7 ಗಂಟೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಈ ಕಡಲಪರ್ಬವನ್ನು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾಗ ಕಿಶೋರ್ ಕುಮಾರ್ ಪುತ್ತೂರು, ಗುರುರಾಜ ಗಂಟಿಹೊಳೆ, ಉಮನಾಥ ಕೋಟ್ಯಾನ್, ರಾಜೇಶ್ ನಾಯ್ಕ್ ಮತ್ತುಇತರ ಗಣ್ಯರು ಭಾಗವಹಿಸಿದ್ದಾರೆ.

27ರಂದು ಸಂಜೆ ಕಾಪು ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರಾದ ಯಶ್‌ಪಾಲ್ ಸುವರ್ಣ, ಹರೀಶ್ ಪೂಂಜಾ, ಭಾಗೀರಥಿ ಮುರಳ್ಯ, ಡಾ. ಧನಂಜಯ ಸರ್ಜಿ, ಪ್ರತಾಪ್ ಸಿಂಹ ನಾಯಕ್ ಮತ್ತು ಬೆಂಗಳೂರಿನ ಎಂ.ಆರ್.ಜೆ.ಗ್ರೂಪ್‌ ಚೇರ್‌ಮನ್ ಕೆ.ಪ್ರಕಾಶ್ ಶೆೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ.

28ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಶಾಸಕ ಸುನಿಲ್ ಕುಮಾರ್, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರಕುಮಾರ್, ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಬಿ.ವೈ.ರಾಘವೇಂದ್ರ, ಕಿರಣ್ ಕೊಡ್ಗಿ, ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಮತ್ತಿತರರು ಭಾಗವಹಿಸಲಿದ್ದಾರೆ.

ರಘು ದೀಕ್ಷಿತ್ ಮತ್ತು ಕುನಾಲ್ ಗಾಂಜಾವಾಲ

ಈ ಮೂರು ದಿನಗಳ ಕಾಲ ವೈವಿಧ್ಯಮಯ ಕ್ರೀಡಾ ಸ್ಪರ್ಧೆಗಳು, ಆಹಾರ ಮೇಳ, ಆರೋಗ್ಯ ಮೇಳ, ಸಾಂಸ್ಕೃತಿಕ ಮೇಳಗಳು ನಡೆಯಲಿವೆ, 26ರಂದು ರಾತ್ರಿ ತುಳು ಹಾಸ್ಯ ನಾಟಕ ಶೋಬಾಜಿ ಪ್ರದರ್ಶನಗೊಳ್ಳಲಿದೆ, 27ರಂದು ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ನೇತೃತ್ವದಲ್ಲಿ ರಸಮಂಜರಿ ಮತ್ತು 28ರಂದು ಖ್ಯಾತ ಗಾಯಕ ಕುನಾಲ್ ಗಾಂಜಾವಾಲ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಲಾಲಾಜಿ ಮೆಂಡನ್, ಪಕ್ಷದ ಪ್ರಮುಖರಾದ ಶಿಲ್ಪಾ ಸುವರ್ಣ, ಗೀತಾಂಜಲಿ ಸುವರ್ಣ, ಶ್ರೀಕಾಂತ ನಾಯಕ್, ವೀಣಾ ಶೆಟ್ಟಿ, ಜಿತೇಂದ್ರ ಶೆೆಟ್ಟಿ ಮುಂತಾದವರಿದ್ದರು,