ಅಕ್ಟೋಬರ್ 17: ಪ್ರಮೋದ್ ಮದ್ವರಾಜ್ ಹುಟ್ಟುಹಬ್ಬ ಪ್ರಯುಕ್ತ ವಿವಿಧ ಕಡೆಗಳಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

 


ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಹುಟ್ಟುಹಬ್ಬವು ಅ. 17ರಂದು ನಡೆಯಲಿದೆ. ಅಂದು ಬೆಳಗ್ಗೆ 8.30ರಿಂದ ಕುಂದಾಪುರ, ಕುಮಟಾ, ಉಡುಪಿ, ಮಣಿಪಾಲ, ಶಿರಸಿ, ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿರುವ ಪ್ರಮೋದ್ ಮಧ್ವರಾಜ್ ಅಭಿಮಾನಿ ಬಳಗದವರಿಂದ ಕುಂದಾಪುರದ ರೆಡ್ ಕ್ರಾಸ್, ಮಣಿಪಾಲ ರಕ್ತನಿಧಿ, ಅಜ್ಜರಕಾಡು ಜಿಲ್ಲಾಸ್ಪತ್ರೆ, ಕುಮಟಾ ರಕ್ತನಿಧಿ, ಶಿರಸಿ ಮಹಾಲಕ್ಷ್ಮೀ ಆಸ್ಪತ್ರೆ ಸಹಿತ ವಿವಿಧ ಕಡೆಗಳಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವು ನಡೆಯಲಿದೆ.