ನಮ್ಮ ತುಳುನಾಡ ಪರಿಷತ್ (ರಿ) ಜಿಲ್ಲಾ ಮಟ್ಟದ ಸಂಘಟನೆ ಅಸ್ತಿತ್ವಕ್ಕೆ - ತುಳುನಾಡು, ತುಳುವರ ಸೇವೆ ಮತ್ತು ತುಳು ಸಂಸ್ಕೃತಿಯ ಉಳಿವಿಗೆ ನಮ್ಮದೊಂದು ಹೆಜ್ಜೆ

 


ತುಳುನಾಡು, ತುಳುವರ ಸೇವೆ ಮತ್ತು ತುಳು ಸಂಸ್ಕೃತಿಯ ಉಳಿವಿಗೆ ನಮ್ಮದೊಂದು ಹೆಜ್ಜೆ

ಉಡುಪಿ: ದಿನಾಂಕ 11-10-2026 ರಂದು ರಿಗಲ್ ನೆಕ್ಸ್ಟ್ ನ ಗ್ರೌಂಡ್ ಫ್ಲೋರ್ ನ ನಮ್ಮ ಜಿಲ್ಲಾ ಕಚೇರಿಯಲ್ಲಿ ನಮ್ಮ  ತುಳುನಾಡ ಪರಿಷತ್ ನ ಧ್ವಜಾರೋಹಣ  ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.











ಈ ಸಂಧರ್ಭದಲ್ಲಿ ಸ್ಥಾಪಕಧ್ಯಕ್ಷರಾದ ರೋಹಿತ್ ಕರಂಬಳ್ಳಿಯವರು ಧ್ವಜಾರೋಹಣ ನೆರವೇರಿಸಿ ಸಭೆಯನ್ನುದ್ಧೆಶಿಸಿ ಮಾತಾಡಿದರು, ಜಿಲ್ಲಾಧ್ಯಕ್ಷರಾದ ಜಯರಾಮ್ ಪೂಜಾರಿಯವರು ಸಭಧ್ಯಕ್ಷತೆಯನ್ನು ವಹಿಸಿ ತುಳುನಾಡು, ತುಳು ಸಂಸ್ಕೃತಿಯ ಬಗ್ಗೆ ವಿವರಿಸಿದರು, ಜಿಲ್ಲಾ ಪದಾಧಿಕಾರಿಗಳಾದ ಮೊಹಮ್ಮದ್ ಹಾರಿಸ್ ಸ್ವಾಗಸಿದರು, ರವಿರಾಜ್ ಶೆಟ್ಟಿ ವಾಚಿಸಿದರು, ಮೋಹನ್ ಕಲ್ಮಾಡಿ ಧನ್ಯವಾದ ಸಲ್ಲಿಸಿದರು  ಹಾಗೂ ಈ ಸಂಧರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಲಾದ ಹರೀಶ್ ಮೂಡಬೆಟ್ಟು, ರಮೇಶ್ ಕುಂದರ್, ರೋಷನ್, ಮಹಿಳಾ ಘಟಕದ ಮಮತಾ ಅಮೀನ್, ಆಶಾ ಕೊಡವೂರ್,  ಶೈನಾ ಮೊಂತಿಸ್, ಸೌಮ್ಯ ಮಲ್ಪೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


​