ಮಲ್ಪೆ: ಅನಧಿಕೃತ ಕಾರ್ಡ್ ಬಳಕೆಯಿಂದ ಎಟಿಎಂನಲ್ಲಿ ಬಾರದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೋರ್ವ ಎಟಿಎಂ ಡಿಸ್‌ಪ್ಲೇಗೆ ಅಗ್ನಿಶಾಮಕ ಸಾಧನದಿಂದ ಹೊಡೆದು ಹಾನಿಗೊಳಿಸಿದ ಘಟನೆ ಹೂಡೆಯಲ್ಲಿ ನಡೆದಿದೆ.
ಆ.30ರಂದು ರಾತ್ರಿ 9.52ರ ಸುಮಾರಿಗೆ ಹೂಡೆ ಕೆನರಾ ಬ್ಯಾಂಕ್ ಶಾಖೆಯ ಆವರಣದಲ್ಲಿರುವ ಎಟಿಎಂಗೆ ಗ್ರಾಹಕರೊಬ್ಬರು ಹಣ ಪಡೆಯಲು ಬಂದಿದ್ದರು. ಅನಧಿಕೃತ ಕಾರ್ಡ್ ಬಳಕೆಯಿಂದ ವ್ಯವಹಾರ ನಿರಾಕರಣೆಯಾಗಿದ್ದರಿಂದ ಆತ ಬೈಕ್ ಕೀಯಿಂದ ಎಟಿಎಂ ಡಿಸ್‌ಪ್ಲೇಗೆ ಹಾನಿ ಮಾಡಲು ಪ್ರಯತ್ನಿಸಿದ್ದಾನೆ. ಬಳಿಕ ಎಟಿಎಂ ಆವರಣದಲ್ಲಿದ್ದ ಅಗ್ನಿಶಾಮಕ ಸಾಧನವನ್ನು ತೆಗೆದುಕೊಂಡು ಡಿಸ್‌ಪ್ಲೇಗೆ ಎರಡು ಬಾರಿ ಹೊಡೆದ ಪರಿಣಾಮ ಡಿಸ್‌ಪ್ಲೇ ಮುರಿದು ಹಾನಿಯಾಗಿದೆ.
ಎಟಿಎಂ ಹಾನಿಗೊಳಿಸಿದ ವ್ಯಕ್ತಿ ಇಸ್ಮಾಯಿಲ್ ಬಿಜಾಪುರಿ ಎಂಬುದು ತಿಳಿದುಬಂದಿದೆ. ಕೆನರಾ ಬ್ಯಾಂಕ್ ಹೂಡೆ ಶಾಖೆಯ ಮ್ಯಾನೇಜರ್ ಕೆ. ರವಿಕುಮಾರ್ (35) ಅವರು ಮಲ್ಪೆ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 96/2026ರಂತೆ BNS ಕಲಂ 324(4) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
