ಸಾಲಿಗ್ರಾಮ:ಬಹುಮುಖ ಪ್ರತಿಭೆಯ ದಿನೇಶ್‌ ಹೊಳ್ಳ ಕಚೇರಿಯಲ್ಲಿ ಕುಳಿತಲ್ಲೇ ಹೃದಯಾಘಾತದಿಂದ ಸಾವು

 


ಸಾಲಿಗ್ರಾಮ: ಫೋಟೋಗ್ರಫಿ, ಕಂಪ್ಯೂಟರ್‌ ತಂತ್ರಜ್ಞಾನ, ವೆಬ್‌ಡಿಸೈನಿಂಗ್‌ ಸಹಿತ ಹಲವು ಕ್ಷೇತ್ರಗಳನ್ನು ಬಲ್ಲ ಬಹುಮುಖ ಪ್ರತಿಭೆ, ಸಾಲಿಗ್ರಾಮದ ದಿನೇಶ್ ಹೊಳ್ಳ (52)  ಇಂದು ಸಾಲಿಗ್ರಾಮದ ತಮ್ಮ ಕಚೇರಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಅವರು ತಾಯಿ ,ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.



ಫೋಟೋಗ್ರಫಿ, ಕಂಪ್ಯೂಟರ್‌ ತಂತ್ರಜ್ಞಾನ, ವೆಬ್‌ಡಿಸೈನಿಂಗ್‌ , ಕಾರ್ಟೂನು ರಚನೆ, ಚಪ್ಪಲಿ ಉದ್ಯಮ ಜೊತೆಗೆ ಇತ್ತೀಚಿನ ದಿನಗಳಲ್ಲಿ ಸಂಖ್ಯಾಶಾಸ್ತ್ರದ ಮೂಲಕ ಜ್ಯೋತಿಷ್ಯ ಹೇಳುತ್ತಿದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ. 

ಇಂದು ಬೆಳಿಗ್ಗೆ ಸಾಲಿಗ್ರಾದಮಲ್ಲಿರುವ ಅವರ ಕಚೇರಿಯಲ್ಲಿ ಕುಳಿತಲ್ಲೇ ಸಾವನ್ನಪ್ಪಿದ ವಿಷಯ ತಿಳಿದು ಆಘಾತಗೊಂಡಿರುವ ಅವರ ಬಂಧು ಮಿತ್ರರು ಶೋಕತಪ್ತರಾಗಿದ್ದಾರೆ.