ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರಕ್ಷಣೆ ಮಾಡಿದ ವಿಶು ಶೆಟ್ಟಿ ಅಂಬಲಪಾಡಿ



ಉಡುಪಿ: ಮಾನಸಿಕ ಖಿನ್ನತೆಗೆ ಒಳಗಾದ ದೃಢಕಾಯ ಯುವಕನೊಬ್ಬ ರಾತ್ರಿ ಹೊತ್ತು ನದಿಗೆ ಹಾರಿ ಆತ್ಮಹತ್ಯೆಗೆ ಹೊರಟಿದ್ದು ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ, ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ಏಪ್ರಿಲ್ 5ರ ರಾತ್ರಿ ನಡೆದಿದೆ.  



ಯುವಕ ಕೊಪ್ಪಲ ಮೂಲದ ಬಸವನಗೌಡ (35) ಜೀವನದಲ್ಲಿ ಜಿಗುಪ್ಸೆ ಹೊಂದಿದ್ದು ಬದುಕಲು ಇಷ್ಟವಿಲ್ಲ, ಸಾಯಬೇಕು ಎಂದು ಗೋಗರೆದಿದ್ದಾನೆ. ಯುವಕನು ದೃಢಕಾಯನಾಗಿದ್ದು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲು ಹರ ಸಾಹಸ ಪಡಬೇಕಾಯಿತು. ರಕ್ಷಣಾ ಕಾರ್ಯದಲ್ಲಿ ಲಕ್ಷ್ಮಿಕಾಂತ ಭಟ್ ಹಾಗೂ ಶ್ರೀನಿವಾಸ್ ರಾವ್ ಸಹಕರಿಸಿದ್ದಾರೆ. 

ನಗರ ಠಾಣೆಗೆ ಮಾಹಿತಿ ನೀಡಲಾಗಿದೆ. ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು ವ್ಯಕ್ತಿಗೆ ಮನೋರೋಗ ಸಮಸ್ಯೆ ಇರುವ ಬಗ್ಗೆ ತಿಳಿಸಿದ್ದು ಕೂಡಲೇ ಉಡುಪಿಗೆ ಬರುವುದಾಗಿ ಹೇಳಿದ್ದಾರೆ.