![]() |
ಉಡುಪಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶವನ್ನು ಪ್ರಕಟಿಸಿದೆ.
ಉಡುಪಿ ಜಿಲ್ಲೆ (ಶೇ. 93.90 ರಷ್ಟು ಫಲಿತಾಂಶ) ಪ್ರಥಮ ಸ್ಥಾನ ಪಡೆದರೆ ದ್ವಿತೀಯ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಪಾಲಾಗಿದೆ. ಯಾದಗಿರಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದಾಗಿದೆ. ಇದರ ಜೊತೆಗೆ, ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಎಸ್‌ಎಂಎಸ್ ಮೂಲಕವೂ ಫಲಿತಾಂಶದ ಮಾಹಿತಿಯನ್ನು ಕಳುಹಿಸಲಾಗಿದೆ.
ಉಡುಪಿ ಜಿಲ್ಲೆ ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜು ವಿಜ್ಞಾನ ವಿಭಾಗ ದ ವೈಷ್ಣವಿ ಕುಲಕರ್ಣಿ 597 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ಉಡುಪಿ ಜಿಲ್ಲೆ ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜು ವಿಜ್ಞಾನ ವಿಭಾಗದಲ್ಲಿ ಚೈತ್ರಿಕ ಚೌಧರಿ ಕೂಡ 597 ಅಂಕ ಗಳಿಸಿ ಜಿಲ್ಲೆಗೆ ಟಾಪರ್ ಎನಿಸಿದ್ದಾಳೆ.
ಉಡುಪಿ ಕಾರ್ಕಳದ ಜ್ಞಾನಸುಧಾ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ವೈಷ್ಣವಿ ಕುಲಕರ್ಣಿ ಕಾಲೇಜ್ ಗೆ ಟಾಪರ್ ಆಗಿದ್ದು ರಾಜ್ಯಮಟ್ಟದಲ್ಲೂ ಉತ್ತಮ ರಾಂಕಿಂಗ್ ನಿರೀಕ್ಷೆ ಹೊಂದಲಾಗಿದೆ.ಇವರು ಮೂಲತಃ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿನಿಯಾಗಿದ್ದಾರೆ.ಇನ್ನು ಜ್ಞಾನಸುಧಾ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಆರ್ನವಿ ಕೂಡ 597 ಅಂಕವನ್ನು ಪಡೆದಿದ್ದಾರೆ.ಫಲಿತಾಂಶ ಪ್ರಕಟವಾದ ನಂತರ ಯಾವ ಸ್ಥಾನ ಎಂಬುದು ಖಚಿತವಾಗಲಿದೆ.
ಇನ್ನು ಜಿಲ್ಲೆಯ ಪ್ರೇರಣಾ ರಾಮಚಂದ್ರ ಹೆಗಡೆ ,ಕಾಮರ್ಸ್ ವಿಭಾಗದಲ್ಲಿ 598 ಅಂಕ ಗಳಿಸಿದ್ದು ,ಈಕೆ ಕಾರ್ಕಳದ ಕ್ರಿಯೇಟಿವ್ ಕಾಲೇಜ್ ವಿದ್ಯಾರ್ಥಿನಿಯಾಗಿದ್ದಾರೆ.
