ಮಣಿಪಾಲ: ಸರಳಬೆಟ್ಟುವಿನ ಉಮಾಮಹೇಶ್ವರಿ ದೇವಸ್ಥಾನದ ಪಕ್ಕದ ಮನೆಯೊಂದರಲ್ಲಿ ಆಟೋ ಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಜುನಾಥ ಅಡಿಗ(34 ) ಆತ್ಮಹತ್ಯೆ ಮಾಡಿಕೊಂಡವರು.
ಮೃತ ಮಂಜುನಾಥ ಅಡಿಗ ಮಣಿಪಾಲ ಸರಳಬೆಟ್ಟು ಪರಿಸರದಲ್ಲಿ ರಿಕ್ಷಾ ಓಡಿಸುತ್ತಿದ್ದು ಸ್ವತಃ ಬಾಡಿಗೆಗೆ ಕಾರುಗಳನ್ನು ಹೊಂದಿದ್ದರು. ಪಡುಬಿದ್ರೆಯ ಕಂಪನಿಗೆ ಬಾಡಿಗೆಗೆ ಒಡಂಬಡಿಕೆ ಮಾಡಿಕೊಂಡಿದ್ದರು. ಮೃತರ ತಾಯಿ ಕೆಎಂಸಿ ಆಸ್ಪತ್ರೆಯ ಶುಶ್ರೂಷೆ ವಿಭಾಗದ ಪ್ರಿನ್ಸ್ ಪಾಲ್ ಆಗಿ ಸೇವೆ ಸಲ್ಲಿಸಿದ್ದು ನಿವೃತ್ತರಾಗಿದ್ದಾರೆ. ಸ್ಥಳೀಯವಾಗಿ ಕಾಂಗ್ರೆಸ್ ಪಕ್ಷದಲ್ಲಿಯೂ ಸಕ್ರಿಯವಾಗಿ ಕಳೆದ ಎರಡು ಮೂರು ಚುನಾವಣೆಯಲ್ಲಿ ಕಾರ್ಯಕರ್ತರಾಗಿ ದುಡಿದಿದ್ದಾರೆ ಎಂದು ತಿಳಿದುಬಂದಿದೆ.
ಪರೋಪಕಾರಿ ಮತ್ತು ಸರಳತೆಯ ಮಂಜುನಾಥ ಅಡಿಗ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ತಂದೆ ತಾಯಿಗೆ ಮಕ್ಕಳಿಲ್ಲದ ಕಾರಣ ಮಂಜುನಾಥ ಅಡಿಗರನ್ನು ದಂಪತಿ ದತ್ತು ಪಡೆದಿದ್ದು, ಮಗನ ಆತ್ಮಹತ್ಯೆ ಗೆ ಕಾರಣ ತಿಳಿದು ಬಂದಿಲ್ಲ, ಒಬ್ಬನೇ ಮಗನನ್ನು ಕಳೆದುಕೊಂಡು ದಂಪತಿ ಚಿಂತಾಕ್ರಾಂತರಾಗಿದ್ದಾರೆ.ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
