ಕಾರ್ಕಳ ರೌಡಿ ಗಣೇಶ್ ಪೂಜಾರಿ ಗೂಂಡಾ ಕಾಯ್ದೆಯಡಿ ಬಂಧನ

 

ರೌಡಿ ಗಣೇಶ್ ಪೂಜಾರಿ

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ  ಗಣೇಶ್ ಪೂಜಾರಿ (48), ತಂದೆ ಸಾಧು ಪೂಜಾರಿ, ಸದ್ಗುಣ ನಿವಾಸ, ಕೌಡೂರು ಗ್ರಾಮ, ಕಾರ್ಕಳ ತಾಲೂಕು, ಇವನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಆದೇಶ ಹೊರಡಿಸಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿಯ ಮೇರೆಗೆ, ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಬಂಧನ ಆದೇಶ ನೀಡಿದ್ದಾರೆ.

ಆರೋಪಿಯ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಒಟ್ಟು 11 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ:

ಕೊಲೆಯತ್ನ – 4 ,ದರೋಡೆ – 1

ಹಲ್ಲೆ – 3,ಅಕ್ರಮ ಕೂಟ – 1

,ಜೂಜಾಟ – 1, ಇತರೆ – 1 ಪ್ರಕರಣ ದಾಖಲಾಗಿದೆ.

ಈ ಪ್ರಕರಣಗಳಲ್ಲಿ 1 ಪ್ರಕರಣದಲ್ಲಿ ಶಿಕ್ಷೆ ಆಗಿದ್ದು, 7 ಪ್ರಕರಣಗಳಲ್ಲಿ ಖುಲಾಸೆ ದೊರೆತಿದೆ. 1 ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಉಳಿದ 2 ಪ್ರಕರಣಗಳು ತನಿಖೆಯಲ್ಲಿವೆ.

ಬಂಧಿತ ಆರೋಪಿಯನ್ನು ಕಲಬುರ್ಗಿ ಕೇಂದ್ರ ಕಾರಾಗೃಹಕ್ಕೆ ಕಳಿಸಲು ಆದೇಶಿಸಲಾಗಿದೆ.