ಉಡುಪಿ: ಚೆಕ್ ಬೌನ್ಸ್ ಪ್ರಕರಣ : ಉದ್ಯಮಿ ,ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಬಂಧನ

 


ಉಡುಪಿ: ಚೆಕ್ ಬೌನ್ಸ್  ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಅವರನ್ನು ಪೊಲೀಸರು ಇಂದು ಬೆಳಿಗ್ಗೆ ಬಂದಿಸಿದ್ದಾರೆ  ಎಂದು ತಿಳಿದುಬಂದಿದೆ.

ಉಡುಪಿ ನಗರದ ಹೃದಯಭಾಗದಲ್ಲಿ ಅಮೃತ್ ಶೆಣೈ ಫ್ಲ್ಯಾಟ್ ಗಳನ್ನು ಕಟ್ಟಿದ್ದು, ನಂತರ ಅದರ ಮಾಲೀಕತ್ವವನ್ನು ವಾರೀಸುದಾರರಿಗೆ ವರ್ಗಾಯಿಸುವಲ್ಲಿ ಅವರು ವಿಫಲರಾಗಿದ್ದರು ಎಂಬ ಆರೋಪಗಳು ಹಿಂದಿನಿಂದಲೂ ಇದ್ದವು.ಇದೀಗ ವ್ಯವಹಾರಕ್ಕೆ ಸಂಬಂಧಿಸಿ ಅವರು ನೀಡಿದ್ದ ಚೆಕ್ ಬೌನ್ಸ್ ಆಗಿದ್ದು ಫ್ಲ್ಯಾಟ್ ನ ಗ್ರಾಹಕರೊಬ್ವರು ಈ ಸಂಬಂಧ ದೂರು ನೀಡಿದ್ದರು.ಅದರಂತೆ ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.