ಜಗತ್ತನ್ನು ಕಾಡುತ್ತಿರುವ ಗಾಝಾ ಪಟ್ಟಿಯ ಮಕ್ಕಳ ಒಂದು ಚಿತ್ರ !



ಪ್ಯಾಲೆಸ್ಟೈನ್ ನ ಗಾಝಾ ಪಟ್ಟಿಯ ಸಣ್ಣ ಮಕ್ಕಳ ರೀಲ್ ನೋಡಿ ಕಣ್ಣಾಳಿಗಳು ತುಂಬಿದವು. ಅಕ್ಟೋಬರ್ 7,2023ರ ತರುವಾಯ ಅಲ್ಲಿ 75,000ಕ್ಕೂ ಹೆಚ್ಚು ಮಂದಿ ಇಸ್ರೇಲಿ ದಾಳಿಗಳಿಂದ ಹತರಾಗಿದ್ದಾರೆ. ಸುಮಾರು 18,000 ಮಕ್ಕಳು ಕೊಲ್ಲಲ್ಪಟ್ಟಿದ್ದಾರೆ. ಒಂದು ಅಂದಾಜಿನ ಅನ್ವಯ ಸುಮಾರು 12,000 ಮಕ್ಕಳು ಒಂದು ಅಂಗವನ್ನಾದರೂ ಕಳೆದುಕೊಂಡಿದ್ದಾರೆ.



ಇಂತಹ ಭೀಕರ ಸಾವು, ನೋವುಗಳ ನಡುವೆ ಈ ರೀಲ್ನಲ್ಲಿರುವ ಮಕ್ಕಳು ಮತ್ತು ಇತರರು ಹೇಗೋ ಉಳಿದಿದ್ದಾರೆ! ಮರಣ ಮತ್ತು ಶವಗಳ ಸಾಗಾಟವನ್ನು ನೋಡಿ, ನೋಡಿ, ಆನಂದದಿಂದ ಆಟವಾಡಬೇಕಾಗಿದ್ದ ಮಕ್ಕಳು ಕಳೇಬರವನ್ನು ಹೊರುವ ಆಟವಾಡುತ್ತಾರೆಂದರೇ, ಅವು ಎಂತಹ ಸಂಕಟವನ್ನು ಅನುಭವಿಸುತ್ತಿರಬಹುದು!  ಸಾವು ಎಂಬುದು ಸಾಮಾನ್ಯ ಸಂಗತಿ ಆಗಿರುವುದರ ದಾರುಣ ಪರಿಣಾಮವಿದು. ಹೃದಯದಲ್ಲಿ ಒಂದಿಷ್ಟು ಒರತೆವುಳ್ಳ ಯಾರಿಗಾದರೂ ಈ ರೀಲ್ ಕಾಡುತ್ತದೆ; ಅಂತಹವರ ಮನಸ್ಸು ವಿಹ್ವಲಗೊಳ್ಳುತ್ತದೆ.

ಮಕ್ಕಳು ಹಿಡಿದಿರುವ ಚಟ್ಟದಲ್ಲಿರುವುದು ಗೊಂಬೆಯಲ್ಲ! ಮಾನವತೆಯ ಶವ.


( ಮ ಶ್ರೀ ಮುರಳಿ ಕೃಷ್ಣ -ಅವರ ಫೇಸ್ ಬುಕ್ ವಾಲ್ ನಿಂದ)