ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭ ವೇಷಧರಿಸಿ, ಸಾರ್ವಜನಿಕ ವಲಯದಲ್ಲಿ ಕಲೆ ಪ್ರದರ್ಶನ ನೀಡಿದ ಸುಷ್ಮಾ ಎಂ ಬಂಟ್ವಾಳ್ , ಸಂಗ್ರಹವಾದ 5 ಲಕ್ಷ ಹಣವನ್ನು ಕಿಡ್ನಿ ವೈಫಲ್ಯದಿಂದ ಗಂಭೀರ ಸ್ಥಿತಿಯಲ್ಲಿದ್ದ ಬಡರೋಗಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.
ಧನ ಸಹಾಯ ಹಸ್ತಾಂತರಿಸುವ ಕಾರ್ಯಕ್ರಮವು ಪೆರಂಪಳ್ಳಿಯಲ್ಲಿರುವ ರೋಗಿಯ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಮಾಜ ಸೇವಕ ನಿತ್ಯಾನಂದ ಒಳಕಾಡು, ಉಡುಪಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗಣರಾಜ್ ಭಟ್, ನಗರ ಪೋಲಿಸ್ ಠಾಣೆಯ ಎಸ್ ಐ ಭರತೇಶ್,
ಅಡ್ವೊಕೇಟ್ ಶಾಂತರಾಮ ಶೆಟ್ಟಿ,ವಿಕ್ರಾಂತ್ ಶೆಟ್ಟಿ ಮಾಲಕರು ಜಿ ಕೆ ಎಲೆಕ್ಟ್ರಿಕಲ್ಸ್ ಮಾಲಕ ವಿಕ್ರಾಂತ್ ಶೆಟ್ಟಿ, ಸುಷ್ಮಾ ಎಸ್ ಬಂಟ್ವಾಳ ಅವರ ಮಿತ್ರ ಬಳಗದವರು, ಮೊದಲಾದವರು ಇದ್ದರು.
ಶಿವಳ್ಳಿ ಗ್ರಾಮದ ಪೆರಂಪಳ್ಳಿ ವಾರ್ಡಿನ ನಿವಾಸಿ ರಂಜಿತ್ ನಾಯ್ಕ್ ಎನ್ನುವರು ಎರಡೂ ಕಿಡ್ನಿಗಳ ವೈಫಲ್ಯದಿಂದ ಅಸಹಾಯಕ ಸ್ಥಿತಿಯಲ್ಲಿದ್ದರು. ವೈದ್ಯರ ಸಲಹೆಯಂತೆ ಅವರಿಗೆ ಬದಲಿ ಕಿಡ್ನಿ ಜೋಡಣೆ ಮಾಡಬೇಕಾಗಿತ್ತು. ಈ ಚಿಕಿತ್ಸೆಗೆ ಸುಮಾರು ₹ 25 ಲಕ್ಷದಷ್ಟು ಹಣದ ಅವಶ್ಯಕತೆಯಿತ್ತು. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಹೆತ್ತವರಿಗೆ ಅಷ್ಟೊಂದು ದೊಡ್ಡ ಮೊತ್ತವನ್ನು ಚಿಕಿತ್ಸೆಗೆ ಭರಿಸುವುದು ಅಸಾಧ್ಯವಾಗಿತ್ತು.
