![]() |
| ಸಾಂದರ್ಭಿಕ ಚಿತ್ರ |
ಮಣಿಪಾಲ: ಇಲ್ಲಿನ ಆಸ್ಪತ್ರೆ ಸಮೀಪದಲ್ಲಿ ಕ್ಯಾಂಟೀನ್‌ನಲ್ಲಿ ಟೀ ಕುಡಿಯುತ್ತಿದ್ದ ವ್ಯಕ್ತಿಯನ್ನು ಅಪಹರಣ ಮಾಡಲಾಗಿದೆ.
ಕೊಡ್ಲಾಡಿ ಗ್ರಾಮದ ರಾಮ ಮಡಿವಾಳ ಅವರು ಸಹೋದರ ಲಕ್ಷ್ಮಣ ಅವರಿಗೆ ಚಿಕಿತ್ಸೆ ಕೊಡಿಸಲು ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆಸ್ಪತ್ರೆ ಹೊರಬದಿಯ ಕ್ಯಾಂಟೀನ್‌ಲ್ಲಿ ಇನ್ನೋರ್ವ ಸಹೋದರ ರಾಜೇಶ್ ಮತ್ತು ಸುಧೀರ್ ಜತೆ ಟೀ ಕುಡಿಯುತ್ತಿರುವಾಗ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಸೆಲ್ಟಾಸ್ ಕಾರಿನಲ್ಲಿ ಏಳೆಂಟು ಮಂದಿ ಬಂದು ರಾಜೇಶ್ ಅವರನ್ನು ಏಕಾಏಕಿ ಹಿಡಿದು ಕಾರಿನಲ್ಲಿ ಮಣಿಪಾಲದಿಂದ ಹಿರಿಯಡಕ ಕಡೆ ಕರೆದುಕೊಂಡು ಹೋಗಿದ್ದಾರೆ. ಕಾರಿನಲ್ಲಿ ಬಂದ ಮಲ್ಲಾರೆಡ್ಡಿ, ತುಳಜಾ, ನರಸಿಂಗ, ಹುಸೇನ್, ಶಂಕರ, ನಾಗೇಶ್, ಪರಮೇಶ್ವರ್ ಹಾಗೂ ವಿಜಯ್ ಅವರು ರಾಜೇಶ್ ಜತೆ ಈ ಹಿಂದೆ ವ್ಯವಹಾರದ ವಿಷಯದಲ್ಲಿ ಮನೆಗೆ ಬಂದಿದ್ದರು. ಅವರೊಂದಿಗಿನ ತೆಲಂಗಾಣದಲ್ಲಿರುವ ವ್ಯವಹಾರದ ವಿಷಯದಲ್ಲಿ ಸಹೋದರನ್ನು ಬಲತ್ಕಾರವಾಗಿ ಅಪಹರಿಸಿಕೊಂಡು ಹೋಗಿರುವ ಬಗ್ಗೆ ರಾಮ ಮಡಿವಾಳ ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
