ಕೊಡಗಿನ ತಡಿಯಾಂಡಮೋಳ್ ಚಾರಣದ ವೇಳೆ ನಾಪತ್ತೆಯಾಗಿದ್ದ ಕೇರಳ ಮೂಲದ ಶರಣ್ಯಾ(36) ಕೊನೆಗೂ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.
ಏಕಾಂಗಿಯಾಗಿ ಚಾರಣ ಮಾಡುವ ಹವ್ಯಾಸದ ಆಕೆ ಗುರುವಾರ ಕಗ್ಗಾಡಿನ ನಡುವೆ ಚಾರಣಪಥ ತಪ್ಪಿಸಿಕೊಂಡು ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡಿದ್ದರು.
ಪತ್ತೆಗಾಗಿ ಅರಣ್ಯ, ಪೊಲೀಸ್, ನಕ್ಸಲ್ ನಿಗ್ರಹದಳ, ಸ್ಥಳೀಯರು ಸೇರಿ ನೂರಾರು ಮಂದಿ ಮೂರುದಿನಗಳ ಸತತ ಕಾರ್ಯಾಚರಣೆ ನಡೆಸಿದ್ದರು. ಥರ್ಮಲ್ ಡ್ರೋಣ್ ಮತ್ತು ಡಾಗ್ ಸ್ಕ್ವಾಡನ್ನು ಕೂಡ ಕಾರ್ಯಾಚರಣೆಯಲ್ಲಿ ಬಳಸಲಾಗಿತ್ತು.
ಮೂರು ದಿನಗಳ ಬಳಿಕ ಭಾನುವಾರ ಸಂಜೆ ಸ್ಥಳೀಯ ಕುಡಿಯ ಸಮುದಾಯದ ಯುವಕರ ತಂಡ ಶರಣ್ಯಾ ಅವರನ್ನು ಪತ್ತೆ ಮಾಡಿದೆ.
