ಉಡುಪಿ ಶಾಸಕ ಯಶ್ಪಾಲ್ ಸುವರ್ಣ ದ್ವೇಷ ಭಾಷಣ- ಪೊಲೀಸರಿಂದ ನೋಟೀಸ್



ಉಡುಪಿ: ಉಡುಪಿಯಲ್ಲಿ ಮಂಗಳವಾರ ಕಾಂಗ್ರೆಸ್ ಮತ್ತು ಕಾಕ್ರೋಚ್ ಪಾರ್ಟಿ ವಿರುದ್ಧ ನಡೆದಿದ್ದ ಪ್ರತಿಭಟನೆಯ ವೇಳೆ ಶಾಸಕ ಯಶ್ಪಾಲ್ ಸುವರ್ಣ ಉಗ್ರ ಭಾಷಣ ಮಾಡಿದ್ದು ವಿವಾದ ಸೃಷ್ಟಿಸಿದೆ. "ಬಾಬರಿ ಮಸೀದಿ ಧ್ವಂಸ ಮಾಡಿದ ರೀತಿಯಲ್ಲೇ ರಾಹುಲ್ ಗಾಂಧಿ ವಂಶವನ್ನು ಧ್ವಂಸ ಮಾಡುತ್ತೇವೆ" ಎಂದು ಹೇಳಿಕೆ ನೀಡಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸಿಗರು ದೂರು ದಾಖಲಿಸಿದ್ದರು. ಅದರಂತೆ ಪೊಲೀಸರು ಶಾಸಕರ ವಿರುದ್ಧ ಎಫ್ ಐ ಆರ್ ದಾಖಲು ಮಾಡಿದ್ದರು. ಇಂದು ಸಂಜೆ ಉಡುಪಿ ಪೊಲೀಸ್ ಠಾಣೆಯ ತನಿಖಾಧಿಕಾರಿ ಶಾಸಕರ ನಿವಾಸಕ್ಕೆ ತೆರಳಿ ನೊಟೀಸ್ ನೀಡಿದ್ದು ಅದನ್ನವರು ಸ್ವೀಕರಿಸಿದರು. 

 "ರಾಹುಲ್ ಗಾಂಧಿ ಅಮಲು ಪದಾರ್ಥ ಸೇವಿಸುವುದರಿಂದ ನಶೆಯಲ್ಲೇ ಮುಳುಗಿರುತ್ತಾರೆ" ಮತ್ತು ಅವರ ವಂಶವನ್ನು ನಾಶ ಮಾಡುತ್ತೇವೆ ಎಂದು ಶಾಸಕರು ಹೇಳಿದ್ದರು.ಇದು ದ್ವೇಷ ಭಾಷಣದ ಅಡಿ ಬರುವುದರಿಂದ ಪೊಲೀಸರು ತನಿಖೆ ಕೈಗೊಳ್ಳಲಿದ್ದಾರೆ.