ಪರ್ಕಳ: ಇಲ್ಲಿನ ಶೆಟ್ಟಿಬೆಟ್ಟು ವಾರ್ಡಿನ ನಿವಾಸಿ, ಹಿರಿಯ ಕಾಂಗ್ರೆಸ್ ಮುಖಂಡ ಶಂಭು ಶೆಟ್ಟಿ (75) ಯವರು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಏಪ್ರಿಲ್ 7 ಬೆಳಿಗ್ಗೆ ನಿಧನ ಹೊಂದಿದ್ದಾರೆ.ಮೃತರು ಪತ್ನಿ, ಮೂರು ಗಂಡು ಹಾಗೂ ಓರ್ವ ಮಗಳನ್ನು ಅಗಲಿದ್ದಾರೆ. ಮರದ ವಹಿವಾಟು ವ್ಯವಹಾರ ನಡೆಸುತ್ತಿದ್ದ ಅವರು ಅಪ್ಪಟ ಕೃಷಿಕರಾಗಿದ್ದರು. ಕಾಂಗ್ರೆಸ್ ಪಕ್ಷವನ್ನು ಈ ಭಾಗದಲ್ಲಿ ಮುನ್ನಡೆಸುವಲ್ಲಿ ಹಾಗೂ ಮಲ್ಪೆ ಮನೋರಮ ಮಧ್ವರಾಜ್ ಸ್ಪರ್ಧಿಸಿದ ಚುನಾವಣೆಯಲ್ಲಿ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಅವರ ಅಗಲಿಕೆಗೆ ಪರ್ಕಳದ ಕಾಂಗ್ರೆಸ್ ಸಮಿತಿ , ಉಡುಪಿ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಹರೀಶ್ ಕಿಣಿ , ಪ್ರಸಾದ್ ರಾಜ್ ಕಾಂಚನ್ ,ಗಣೇಶ್ ರಾಜ್ ಸರಳೆಬೆಟ್ಟು ಮತ್ತಿತರರು ಸಂತಾಪ ಸೂಚಿಸಿದ್ದಾರೆ.
