ಉಡುಪಿ:ಹುಟ್ಟೂರ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ



ಉಡುಪಿ: ಹುಟ್ಟೂರು  ಉಡುಪಿಯ ಅಲೆವೂರಿನ ಕಲ್ಯಾಣ ನಗರದಲ್ಲಿ ನಟ ರಕ್ಷಿತ್ ಶೆಟ್ಟಿ ನೇಮೋತ್ಸವದಲ್ಲಿ ಭಾಗಿಯಾದರು.ಅಲೆವೂರು ದೊಡ್ಡಮನೆ ಮನೆತನದವರು ಈ  ನೇಮೋತ್ಸವವನ್ನು ನಡೆಸುತ್ತಾರೆ. ನಟ ರಕ್ಷಿತ್ ಶೆಟ್ಟಿ ಕೂಡ ಅಲೆವೂರು ದೊಡ್ಡಮನೆ ಕುಟುಂಬದವರು.ಈ ಹಿನ್ನೆಲೆಯಲ್ಲಿ ವರ್ಷಂಪ್ರತಿ ನಡೆಯುವ ನೇಮೋತ್ಸವದಲ್ಲಿ ಅವರು ಕುಟುಂಬ ಸದಸ್ಯರ ಜೊತೆ ಭಾಗಿಯಾಗುತ್ತಾರೆ.

ಶನಿವಾರ ರಾತ್ರಿ ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವ ಆಯೋಜನೆಗೊಂಡಿತ್ತು.ಬಹಳ ಹೊತ್ತು ನೇಮೋತ್ಸವದಲ್ಲಿ ಕುಳಿತು ಬಳಿಕ ರಕ್ಷಿತ್ ಶೆಟ್ಟಿ ವಾಪಸಾದರು. ಮುಂಬರುವ ಸಿನಿಮಾಗಳ ಕೆಲಸದಲ್ಲಿ ಈ ನಟ ಬ್ಯುಸಿಯಾಗಿದ್ದು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ.