
ಆಶಿಕ್ - ಅಲ್ತಫ್
ಉಡುಪಿ:ಕೇರಳ ಮೂಲದ ಇಬ್ಬರು ಅಂತರ್ ರಾಜ್ಯ ಬೈಕ್ ಕಳ್ಳರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಆಶಿಕ್ ಅನ್ಸಾರ್ (19) ಮತ್ತು ಮಹಮ್ಮದ್ ಅಲ್ತಫ್ ( 23) ಬಂಧಿತರು.
ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ: 215/202025 ಕಲಂ 303(2) ಬಿಎನ್ ಎಸ್ ರಂತೆ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ಬಂಧಿಸಿರುವ ಉಡುಪಿ ಪೊಲೀಸರು ಅವರ ಬಳಿ ಇದ್ದ ಕಳವು ಮಾಡಿದ ಬೈಕ್ ನ್ನು ವಶಪಡಿಸಿಕೊಂಡಿದ್ದಾರೆ. ಆಶಿಕ್ ಅನ್ಸಾರ್ ವಿರುದ್ಧ ಕೇರಳ ರಾಜ್ಯದಲ್ಲಿ 2 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 1 ಮನೆಕಳ್ಳತನ ಪ್ರಕರಣ, ಇನ್ನೊಂದು ಗಾಂಜಾ ಸೇವನೆ ಪ್ರಕರಣವಾಗಿದೆ. ಮತ್ತೋರ್ವ ಆರೋಪಿ ಮಹಮ್ಮದ್ ಅಲ್ತಫ್ ವಿರುದ್ಧ ಕೇರಳ ರಾಜ್ಯದಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 3 ಕಳ್ಳತನ ಪ್ರಕರಣ 2 ಗಾಂಜಾಸೇವನೆ ಪ್ರಕರಣಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.