![]() |
| ಲಾಟರಿ ಗೆದ್ದ ಅನಿಲ್ ಕುಮಾರ್ |
ಅಬುದಾಬಿ: ಭಾರತದ 29 ವರ್ಷದ ಯುವಕನೊಬ್ಬ ಅಬುಧಾಬಿಯಲ್ಲಿ 240 ಕೋಟಿ ರೂಪಾಯಿ ಜಾಕ್ ಪಾಟ್ ಲಾಟರಿ ಗೆದ್ದಿದ್ದಾನೆ. ಭಾರತದ ಅನಿಲ್ ಕುಮಾರ್ ಬೊಲ್ಲಾ ಎಂಬಾತನೇ ಆ ಅದೃಷ್ಟಶಾಲಿ. ಇತ್ತೀಚೆಗೆ ಅಬುಧಾಬಿಯಲ್ಲಿ ನಡೆದ ಲಕ್ಕಿ ಡೇ ಡ್ರಾನಲ್ಲಿ ಅನಿಲ್ ಕುಮಾರ್ ಗ್ರ್ಯಾಂಡ್ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ.
ಲಾಟರಿ ವಿಜೇತ ಅನಿಲ್ ಕುಮಾರ್ ವಿಡಿಯೋವನ್ನು ಯುಎಇ ಲಾಟರಿ ಸಂಸ್ಥೆಯು ಟ್ವೀಟರ್ ನಲ್ಲಿ ಜನರ ಜೊತೆ ಹಂಚಿಕೊಂಡಿದೆ. ನಿರೀಕ್ಷೆಯಿಂದ ಆಚರಣೆವರೆಗೆ ಎಂದು ಕಾಪ್ಷನ್ ನೀಡಲಾಗಿದೆ. ಒಂದು ಅದೃಷ್ಟದ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅನಿಲ್‌ಕುಮಾರ್ ಗೆ ಅಕ್ಟೋಬರ್ 18 ಬರೀ ಮತ್ತೊಂದು ದಿನವಲ್ಲ. ಆ ದಿನ ಎಲ್ಲವನ್ನೂ ಬದಲಾಯಿಸಿಬಿಟ್ಟಿತ್ತು. ಜೀವನ ಬದಲಾವಣೆ ಮತ್ತು ನೀವು ಧೈರ್ಯ ಮಾಡಿ ಊಹಿಸಿಕೊಳ್ಳುವುದರಿಂದ ಏನಾಗುತ್ತೆ ಎಂಬುದರ ನೆನಪು. ಕಂಗ್ರಾಜುಲೇಷನ್ ಅನಿಲ್ ಕುಮಾರ್ ಎಂದು ಯುಎಇ ಲಾಟರಿ ಸಂಸ್ಥೆ ಟ್ವೀಟ್ ಮಾಡಿದೆ.
ವಿಡಿಯೋದಲ್ಲಿ ಅನಿಲ್ ಕುಮಾರ್ ತಮ್ಮ ಲಾಟರಿ ಗೆಲುವು ಅನ್ನು ಸಂಭ್ರಮಿಸುವುದನ್ನು ತೋರಿಸಲಾಗಿದೆ.ಅನಿಲ್ ಕುಮಾರ್‌ಗೆ ಲಾಟರಿ ಗೆದ್ದ ಹಣದ ಚೆಕ್ ನೀಡಲಾಗಿದೆ. ವಿಡಿಯೋದಲ್ಲಿ ಅನಿಲ್ ಕುಮಾರ್, ತಾವು ಗೆದ್ದ ಲಾಟರಿ ಟಿಕೆಟ್‌ನ ನಂಬರ್ ಆಯ್ಕೆ ಮಾಡಿಕೊಂಡ ಸ್ಟೋರಿಯನ್ನ ಹಂಚಿಕೊಂಡಿದ್ದಾರೆ. ಜೊತೆಗೆ ಲಾಟರಿ ಗೆದ್ದ ಬಳಿಕ ರಿಯಾಕ್ಷನ್ ಅನ್ನು ಹಂಚಿಕೊಂಡಿದ್ದಾರೆ. ನಾನು ಯಾವುದೇ ಮ್ಯಾಜಿಕ್ ಮಾಡಿಲ್ಲ. ನಾನು ಬರೀ ಸುಲಭ ಆಯ್ಕೆ ಮಾಡಿಕೊಂಡೆ. ಲಾಟರಿಯ ಕೊನೆಯ ನಂಬರ್ ಬಹಳ ಸ್ಪೆಷಲ್ . ಅದು ನನ್ನ ತಾಯಿಯ ಹುಟ್ಟುಹಬ್ಬದ ನಂಬರ್ ಎಂದು ಅನಿಲ್ ಕುಮಾರ್ ಹೇಳಿದ್ದಾರೆ.
ಲಾಟರಿ ಗೆದ್ದ ಸುದ್ದಿ ಗೊತ್ತಾದಾಗ, ನನಗೆ ಶಾಕ್ ಆಗಿತ್ತು. ನಾನು ಆಗ ಸೋಫಾ ಮೇಲೆ ಕುಳಿತಿದ್ದೆ. ಆಗ ನಾನು ಹೌದು, ನಾನು ಲಾಟರಿ ಗೆದ್ದಿದ್ದೇನೆ ಎಂದು ಅನ್ನಿಸಿತು. ಲಾಟರಿಯಿಂದ ಗೆದ್ದ 240 ಕೋಟಿ ರೂಪಾಯಿ ಹಣವನ್ನು ಜವಾಬ್ದಾರಿಯುತವಾಗಿ ಖರ್ಚು ಮಾಡುವುದಾಗಿ ಅನಿಲ್ ಕುಮಾರ್ ಹೇಳಿದ್ದಾರೆ. ನಾನು ಈ ಹಣವನ್ನು ಹೇಗೆ ಹೂಡಿಕೆ ಮಾಡಬೇಕು ಎಂಬುದರ ಬಗ್ಗೆ ಆಲೋಚಿಸುತ್ತಿದ್ದೆ. ಸರಿಯಾದ ರೀತಿಯಲ್ಲಿ ಹಣವನ್ನು ಖರ್ಚು ಮಾಡಬೇಕು. ಲಾಟರಿ ಗೆದ್ದ ಬಳಿಕ ನನಗೆ ನನ್ನ ಬಳಿ ಹಣ ಇದೆ ಅನ್ನಿಸಿತು. ಈಗ ನಾನು ಸರಿಯಾದ ದಾರಿಯಲ್ಲಿ ಆಲೋಚನೆ ಮಾಡಬೇಕು. ನಾನು ಏನನ್ನಾದರೂ ದೊಡ್ಡದ್ದನ್ನು ಮಾಡಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
