ಉಡುಪಿ: ಬ್ರಹ್ಮಾವರ ಠಾಣೆ ವ್ಯಾಪ್ತಿಯಲ್ಲಿ ಅಕ್ಷತಾ ಪೂಜಾರಿ ಎಂಬ ಯುವತಿ ಮೇಲೆ ಪೊಲೀಸರು ದುರ್ವರ್ತನೆ ತೋರಿದ್ದಾರೆ ಎಂಬ ಆರೋಪ ಸಂಪೂರ್ಣ ಸುಳ್ಳು. ಪೊಲೀಸರು ಅವರ ಮನೆಯ ಒಳಗೆ ಹೋಗಿಯೇ ಇಲ್ಲ. ನಾನು ಕೂಡ ಪೊಲೀಸರ ಜೊತೆಗೆ ಇದ್ದೆ. ಅವರ ಆರೋಪ ನಿರಾಧಾರವಾದದ್ದು ಎಂದು ದೇವೇಂದ್ರ ಸುವರ್ಣ ಹೇಳಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ನನಗೆ ಅನ್ಯಾಯ ಆಗಿದೆ.ನಾನು ಕೂಡ ಸಮುದಾಯದ ಜನರ ಬೆಂಬಲದೊಂದಿಗೆ ಹೋರಾಟ ನಡೆಸುವ ಬಗ್ಗೆ ಯೋಚನೆ ಮಾಡುತ್ತಿದ್ದೇನೆ.ಅಕ್ಷತಾ ಪೂಜಾರಿ ಎಲ್ಲರೂ ನಂಬುವ ರೀತಿಯಲ್ಲಿ ಪೊಲೀಸರು ಮತ್ತು ನನ್ನ ಮೇಲೆ ದೊಡ್ಡ ಮಟ್ಟದಲ್ಲಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸತ್ಯ ಇವತ್ತಲ್ಲ ನಾಳೆ ತಿಳಿಯುತ್ತದೆ. ಕೋರ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಆಶಿಕ್ ಎಂಬವರ ಮನೆಗೆ ಪೊಲೀಸರು ಹೋದಾಗ ನಾನು ಜೊತೆಯಲ್ಲಿದ್ದೆ. ಪೊಲೀಸರು ಅಕ್ಷತಾ ಪೂಜಾರಿಗೆ ಯಾವುದೇ ರೀತಿ ಹಲ್ಲೆ ಮಾಡಿಲ್ಲ.ನಾನು ಅಕ್ಷತಾ ಮನೆಯಿಂದ ಕೆಲವು ದೂರ ನಿಂತಿದ್ದೆ. ಪೊಲೀಸರು ಕೂಡ ಮನೆಯೊಳಗೆ ಪ್ರವೇಶನ ಮಾಡಿಲ್ಲ. ಈ ಸಂಬಂಧ ಪೊಲೀಸರು ವಿಡಿಯೋ ಚಿತ್ರೀಕರಣ ಮಾಡಿ ಇಟ್ಟುಕೊಂಡಿದ್ದಾರೆ. ಆದರೆ ಇದೀಗ ನನ್ನ ಮೇಲೆ ಮತ್ತು ಪೊಲೀಸರ ಮೇಲೆ ಆರೋಪ ಕೇಳಿ ಬಂದಿದ್ದು ನನಗೆ ಅನ್ಯಾಯ ಆಗಿದೆ. ಸತ್ಯಾಂಶ ಇಂದಲ್ಲ ನಾಳೆ ಹೊರ ಬರಲಿದೆ ಎಂದು ದೇವೇಂದ್ರ ಸುವರ್ಣ ಹೇಳಿದ್ದಾರೆ.
