ಉಡುಪಿಯ ಸಾಮಾಜಿಕ ಕಾರ್ಯಕರ್ತ ಎಂ. ಇಕ್ಬಲ್ ಮನ್ನಾಗೆ ಸಾಹೇಬನ್ UAE 2026 ಪ್ರಶಸ್ತಿ ಪ್ರದಾನ



ಸಾಹೇಬನ್ ಯು. ಎ. ಇ (UAE) 2026 ಉರ್ದು /ಹಿಂದಿ ಮಾತನಾಡುವ ಮುಸ್ಲಿಮ್ ಸಮಾಜದ ಸಂಘಟನೆಯು, ಈ ಸಾಲಿನ ಪ್ರಶಸ್ತಿಯನ್ನು ಉಡುಪಿಯ ಸಾಮಾಜಿಕ ಕಾರ್ಯಕರ್ತ ಬ್ರಾಹ್ಮಗಿರಿಯ ಎಂ. ಇಕ್ಬಾಲ್ ಮನ್ನಾ  ಅವರಿಗೆ  ಪ್ರದಾನ ಮಾಡಿತು. ದುಬೈಯಲ್ಲಿ ನಡೆದ ಸಾಹೇಬನ್ ಮೀಟ್ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದುಬೈಯ ಹೆಸರಾಂತ ಉದ್ಯೋಗಿ ಗಳಾದ ಆಫ್ರೋಜ್ ಅಸ್ಸಾದಿ, ಕೆ. ಎಸ್‌ ನಿಸಾರ್ ಅಹ್ಮದ್, ಕೆ.ಎಸ್ ಇಮ್ತಿಯಾಜ್ ಅಹ್ಮದ್ ಕಾರ್ಕಳ, ಮತೀನ್ ಅಹ್ಮದ್ ಉಡುಪಿಯ ಯಾಸೀನ್ ಮಲ್ಪೆ, ಅಲ್ತಾಫ್ ಎಂ.ಸ್, ಸಮೀಲ್ಲಾಹ್ ಗಂಗೊಳ್ಳಿ, ಅಜ್ಮಾಲ್, ಮಮ್ ತಜ್ ಹುಸೇನ್ ಹಾಗೂ ಅಲ್ತಾಫ್ ಖಲೀಫಿ ಮತ್ತಿತರರು ಈ ಸಂದರ್ಭ  ಉಪಸ್ಥಿತರಿದ್ದರು.