ಹೆಬ್ರಿ:ಜಾನುವಾರು ಹತ್ಯೆ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

ವಸಿಂ ಅಕ್ರಂ- ಸೈಫನ್ ಮುಕ್ತಸರ 

ಹೆಬ್ರಿ:  ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಜಾನುವಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮಂಗಳೂರಿನ ಮೂಡು ತೆರಾರು ಗ್ರಾಮದ ಗಂಜೀಮಠ ಬಸ್ ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದಾರೆ. 

ಉಡುಪಿಯ ಕೆಮ್ಮಣ್ಣು ಹೂಡೆ ನಿವಾಸಿಗಳಾದ ವಸಿಂ ಅಕ್ರಮ್(32) ಹಾಗೂ ಸೈಫನ್ ಮುಕ್ತಸರ ಬಂಧಿತ ಆರೋಪಿಗಳು.  ಇವರಿಬ್ಬರ ವಿರುದ್ಧ ಹೆಬ್ರಿ ಠಾಣೆಯಲ್ಲಿ ಅ.ಕ್ರ :02/2026 U/S 303(2) 3(5) ಬಿ ಏನ್ ಎಸ್ ಮತ್ತು ಕಲಂ 11(1)(D) ಪ್ರಾಣಿ ಹಿಂಸಾ ಪ್ರತಿಬಂದಕ ಕಾಯ್ದೆ ಮತ್ತು ಕಲಂ: 4,5,7,12 ಕರ್ನಾಟಕ ಜಾನುವಾರು ಹತ್ಯೆ  ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಮಂಗಳೂರಿನ ಮೂಡು ತೆರಾರು ಗ್ರಾಮದ ಗಂಜೀಮಠ ಬಸ್ ನಿಲ್ದಾಣದ ಬಳಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.