ರಾಜ್ಯಾದ್ಯಂತ ವಿಮೆನ್ ಇಂಡಿಯಾ ಮೂವ್ಮೆಂಟ್ ನ 10 ನೇ ವರ್ಷದ ಸಂಸ್ಥಾಪನಾ ದಿನಾಚರಣೆ



ವಿಮೆನ್ ಇಂಡಿಯಾ ಮೂವ್ಮೆಂಟ್ ನ  10 ನೇ ವರ್ಷದ ಸಂಸ್ಥಾಪನಾ ದಿನವನ್ನು " 10 ವರ್ಷಗಳ ಭಯದ ರಾಜಕೀಯದ ಪ್ರತಿರೋಧ" ಎಂಬ ಘೋಷವಾಕ್ಯದಡಿ ಜನವರಿ ಹತ್ತರಂದು  ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಬ್ರಾಂಚ್, ಅಸೆಂಬ್ಲಿ ಹಾಗೂ ಜಿಲ್ಲಾ ಮಟ್ಟಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ,ವ್ರದ್ಧಾಶ್ರಮ ಭೇಟಿ, SIR ಕುರಿತ ಮಾಹಿತಿ ಶಿಬಿರ, ಮತದಾರರಿಗೆ ಗುರುತಿನ ಚೀಟಿ  ಮಾಡಿಸಿ ಕೊಡುವುದು ಮುಂತಾದ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ದಕ್ಷಿಣ ಕನ್ನಡ ನಗರ ಜಿಲ್ಲೆಯ ಬಜಪೆ ಪಟ್ಟಣ ಪಂಚಾಯತ್ ಗೆ  ನೂತನವಾಗಿ ಆಯ್ಕೆಯಾದ ಮಹಿಳಾ  ಸದಸ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಹಲವು  ಮಹಿಳೆಯರು ವಿಮ್ ನ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು  ಸದಸ್ಯತ್ವವನ್ನು ಪಡೆದುಕೊಂಡರು.ರಾಷ್ಟ್ರ,ರಾಜ್ಯ ಹಾಗೂ ಜಿಲ್ಲಾ ಮಟ್ಟದ  ನಾಯಕಿಯರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಮ್ ಸಂಸ್ಥಾಪನಾ  ದಿನದ ಸಂದೇಶವನ್ನು ನೀಡಿದರು.

ಮಹಿಳಾ ರಾಜಕೀಯದ ಅಗತ್ಯತೆ , ಸಮಾನ ನ್ಯಾಯ, ಸ್ವಾತಂತ್ರ್ಯ,  ಮಹಿಳಾ ಹಕ್ಕುಗಳ ಕುರಿತಾದ ಮಾಹಿತಿ,  ಸಾಮಾಜಿಕ ಜವಾಬ್ದಾರಿಗಳ ಕುರಿತು ಜಾಗೃತಿ ಮೂಡಿಸಿದರು.