ಉಡುಪಿ : ಬೆಳಗ್ಗಿನಜಾವ ನಗರದ ಹಳೆ ಬಸ್ಸು ನಿಲ್ದಾಣ, ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಬಾಹಿರವಾಗಿ ಮದ್ಯ ಮಾರಾಟ ನಡೆಯುತ್ತಿದೆ ಎನ್ನುವ ನಿಖರ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿರುವ ಹಿನ್ನಲೆಯಲ್ಲಿ ನಗರ ಪೋಲಿಸ್ ಠಾಣೆಯಿಂದ ಕ್ಷಿಪ್ರ ಕಾರ್ಯಚರಣೆ ನಡೆಯಿತು. ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಬಾಗಲಕೋಟೆ ಮೂಲದ ಕಂಟ್ಯಪ್ಪ ಮೇಥಿ (32) ಎಂದು ತಿಳಿದುಬಂದಿದೆ.
ಸ್ಕೂಟರಿನಲ್ಲಿ ಬಂದಿರುವ ವ್ಯಕ್ತಿಯೋರ್ವ, ಸಿಟಿ ಬಸ್ಸು ನಿಲ್ದಾಣದಲ್ಲಿ ಮದ್ಯದ ಪೊಟ್ಟಣಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿತು. ತಕ್ಷಣ ಪೋಲಿಸರು ಅಕ್ರಮ ಮದ್ಯ ಮಾರಟಗಾರನನ್ನು ವಶಕ್ಕೆ ಪಡೆದುಕೊಂಡು, ತಪಾಸಣೆ ನಡೆಸಿದಾಗ 4,ಲೀಟರ್ ಮದ್ಯ ಪತ್ತೆಯಾಗಿದೆ. ಈ ಬಗ್ಗೆ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ.
ನಿರೀಕ್ಷಕ ಮಹೇಶ್ ಪ್ರಸಾದ್, ಉಪನಿರೀಕ್ಷಕ ಭರತೇಶ್ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಮುಖ್ಯ ಆರಕ್ಷಕ ಬಶೀರ್ ಭಾಗಿಯಾಗಿದ್ದರು. ಪೋಲಿಸರು ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರ ಸಹಕಾರವನ್ನು ಪಡೆದುಕೊಂಡಿದ್ದರು.
