ಲಯನ್ಸ್ ಕ್ಲಬ್ 317 D ಇದರ ಅಧ್ಯಕ್ಷರಾಗಿ ಅಭಿರಾಜ್ ಎಂ. ಸುವರ್ಣ ಆಯ್ಕೆಯಾಗಿದ್ದಾರೆ.ಕಾರ್ಯದರ್ಶಿಯಾಗಿ ಶ್ರೀವತ್ಸ , ಕೋಶಾಧಿಕಾರಿಯಾಗಿ ಭಗೀರತ್ ಸಾಲ್ಯಾನ್ ಆಯ್ಕೆಯಾಗಿದ್ದಾರೆ.
ಉಡುಪಿ ಗವರ್ನರ್ ಸ್ವಪ್ನ ಸುರೇಶ್ ಅಧ್ಯಕ್ಷತೆಯಲ್ಲಿ ಬುಧವಾರ ಉಡುಪಿಯ ಟೌನ್ ಹಾಲ್ ನಲ್ಲಿ ಪದಗ್ರಹಣ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ನಿಕಟಪೂರ್ವ ಜಿಲ್ಲಾ ಗವರ್ನರ್ ಕುಡುಪಿ ಅರವಿಂದ್ ಶೆಣೈ , ಜಿಲ್ಲಾ ಕಾರ್ಯದರ್ಶಿ ಸದಾನಂದ ನಾವಡ , ಪ್ರಾಂತೀಯ ಅಧ್ಯಕ್ಷ ಲೂಯಿಸ್ ಲೋಬೋ ,ವಲಯಾಧ್ಯಕ್ಷ ಶೇಖರ್ ಶೆಟ್ಟಿ ,ಜಿಲ್ಲಾ ಕೋಶಾಧಿಕಾರಿ ವಿನೋದಾ , ಲಿಯೋ ಜಿಲ್ಲಾಧ್ಯಕ್ಷೆ ಸಂಜನಾ ಬಾಳಿಗಾ,ಸುರೇಶ್ ಪ್ರಭು ,ಗೀತಾಂಜಲಿ ಸುವರ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

