ಸಿದ್ದರಾಮಯ್ಯ ಭೇಟಿಯಾದ ಸಿಎಂ ಡಿಕೆಶಿ- ಮುಖ್ಯಮಂತ್ರಿಯಾಗಿ ತಿಂಗಳು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಭೇಟಿ


 

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯಾಗಿ ಒಂದು ತಿಂಗಳ ಸೇವೆಯನ್ನು ಪೂರ್ಣಗೊಳಿಸಿದ ಅಂಗವಾಗಿ ಡಿ.ಕೆ ಶಿವಕುಮಾರ್ ಇಂದು ಕುಟುಂಬದೊಂದಿಗೆ  ಸಿದ್ದರಾಮಯ್ಯ ಅವರನ್ನು, ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.



ಸಿದ್ದರಾಮಯ್ಯನವರ ದೂರದೃಷ್ಟಿಯ ನಾಯಕತ್ವ, ಅಪಾರ ಆಡಳಿತ ಅನುಭವ ಹಾಗೂ ನಾಡಿನ ಜನರ ಅಭಿವೃದ್ಧಿಯತ್ತ ಅವರ ಅಚಲ ಬದ್ಧತೆ ನಮ್ಮ ರಾಜ್ಯದ ಪ್ರಗತಿಯ ಪಯಣಕ್ಕೆ ಸದಾ ಬಲ ತುಂಬಲಿದೆ. ರಾಜ್ಯದ ಸಮಗ್ರ ಅಭಿವೃದ್ಧಿ, ಜನಕಲ್ಯಾಣ ಮತ್ತು ಸುಭದ್ರ ಭವಿಷ್ಯ ನಿರ್ಮಾಣಕ್ಕೆ ಸಿದ್ದರಾಮಯ್ಯನವರ ಮಾರ್ಗದರ್ಶನ ಮತ್ತು ಆಶೀರ್ವಾದವು ಸದಾ ಪ್ರೇರಣೆಯಾಗಿದೆ. ಸಿದ್ದರಾಮಯ್ಯನವರ ಆಶೀರ್ವಾದ ಮತ್ತು ನಿರಂತರ ಮಾರ್ಗದರ್ಶನಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ.