ಲಯನ್ಸ್ ಜಿಲ್ಲೆ 317 ಸಿ – ರೀಜನ್ 4, ವಲಯ 1ರ ವಲಯಾಧ್ಯಕ್ಷರಾಗಿ ಪೂರ್ಣಿಮಾ ಶೆಟ್ಟಿ

 


ಉಡುಪಿ: ಲಯನ್ಸ್ ಜಿಲ್ಲೆ 317 ಸಿಯ ರೀಜನ್ 4, ವಲಯ 1ರ 2026–27ನೇ ಸಾಲಿನ ವಲಯಾಧ್ಯಕ್ಷರಾಗಿ ಪೂರ್ಣಿಮಾ ಶೆಟ್ಟಿ ಆಯ್ಕೆಯಾಗಿದ್ದಾರೆ.

ಪೂರ್ಣಿಮಾ ಶೆಟ್ಟಿಯವರು ಲಯನ್ಸ್ ಕ್ಲಬ್ ಮಣಿಪಾಲ್ ಯುಕ್ತಿಯ ಸಕ್ರಿಯ ಸದಸ್ಯೆಯಾಗಿದ್ದು, ಈ ಹಿಂದೆ ಅಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ವಲಯ 1ರ ವ್ಯಾಪ್ತಿಯಲ್ಲಿ ಲಯನ್ಸ್ ಕ್ಲಬ್ ಮಣಿಪಾಲ್ ಯುಕ್ತಿ, ಉಡುಪಿ ಇಂದ್ರಾಳಿ, ಉಡುಪಿ ಸಮೃದ್ಧಿ ಹಾಗೂ ಉಡುಪಿ ಬನ್ನಂಜೆ ಕ್ಲಬ್‌ಗಳು ಸೇರಿವೆ.