ಶಿರ್ತಾಡಿ: ಯುನೈಟೆಡ್ ಕರಾಟೆ ಬುಡೋಕಾನ್ ಇಂಟರ್ ನ್ಯಾಷನಲ್ ವತಿಯಿಂದ ಬ್ಲಾಕ್ ಬೆಲ್ಟ್ ಪರೀಕ್ಷೆ ಹಾಗೂ ತರಬೇತಿ ಶಿಬಿರವು ಮೇ 15,16 ಮತ್ತು 17 ರಂದು ಮೂಡಬಿದ್ರೆಯ ಭುವನ ಜ್ಯೋತಿ ವಸತಿ ಶಾಲೆ, ಶಿರ್ತಾಡಿಯಲ್ಲಿ ನೆರವೇರಿತು
ಯುನೈಟೆಡ್ ಕರಾಟೆ ಬುಡೋಕಾನ್ ಇಂಟರ್ ನ್ಯಾಷನಲ್ ಸಂಸ್ಥೆಯ ವತಿಯಿಂದ ಶಿಬಿರದಲ್ಲಿ 118 ಸದಸ್ಯರು ಭಾಗವಹಿಸಿದ್ದು, ಅದರಲ್ಲಿ 98 ಸದಸ್ಯರು ಬ್ಲಾಕ್ ಬೆಲ್ಟ್ ಹಾಗೂ ಉನ್ನತ ದರ್ಜೆ ಬ್ಲಾಕ್ ಬೆಲ್ಟ್ ಪದವಿಗೆ ತೇರ್ಗಡೆ ಗೊಂಡರು.ಈ ಪರೀಕ್ಷೆಯನ್ನು ಸಂಸ್ಥೆಯ ಅಧ್ಯಕ್ಷರಾದ ಕೆ.ಆನಂದ ದೇವಾಡಿಗ, ಮುಖ್ಯ ಕಾರ್ಯದರ್ಶಿ ಎಂ.ಸುರೇಶ್, ಹಿರಿಯ ಉಪಾಧ್ಯಕ್ಷ ಪ್ರಭಾಕರ ಕುಂದರ್, ತಾಂತ್ರಿಕ ನಿರ್ದೇಶಕ ಬಾಲಕೃಷ್ಣ ಆಳ್ವ ಹಾಗೂ ಹಿರಿಯ ಶಿಕ್ಷಕರುಗಳಾದ ಗುರುಪ್ರಸಾದ್ ಕಾರಂತ್, ಗೋಪಾಲ್ ವಿ, ಶಿವಪ್ರಸಾದ್ ಆಚಾರ್ಯ, ರವಿಶಂಕರ್ ನಾಯಕ್, ಪ್ರವೀಣ ಸುವರ್ಣ ಭಾಗವಹಿಸಿ ಸಹಕರಿಸಿದರು.
