ಉಡುಪಿ: ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್ಅವರ ಪುತ್ರ ರೋಹನ್ ಆರ್. ಬಾರಿತ್ತಾಯ ಅವರು, ಗ್ಲಾಸ್ಕೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ತಂಡಕ್ಕೆ ಅಧಿಕೃತ ಫಿಸಿಯೋ ಮತ್ತು ರಿಕವರಿ ಥೆರಪಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ರಾಜ್ಯ ಕ್ರೀಡಾ ವಿಜ್ಞಾನ ವಿಭಾಗಕ್ಕೆ ಸಂದ ಹಿರಿಮೆಯ ಗರಿಯೆನಿಸಿದೆ.
ಯುಕೆಯ ಲಾಫ್‌ಬೋರೋ ವಿವಿಯಲ್ಲಿ ಸ್ಟ್ರೆಂತ್ ಆ್ಯಂಡ್ ಕಂಡೀಶನಿಂಗ್‌ನಲ್ಲಿ ಎಂಎಸ್ಸಿ ಮುಗಿಸಿರುವ ರೋಹನ್, ಉಡುಪಿ ಮತ್ತು ಇತರ ಭಾಗಗಳಲ್ಲಿ ಫಿಸಿಯೋ ಮತ್ತು ರಿಕವರಿ ಥೆರಪಿಸ್ಟ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ಅವರಿಗೆ ಭಾರತೀಯ ತಂಡದಲ್ಲಿ ಜವಾಬ್ದಾರಿ ನೀಡಲಾಗಿದೆ.
