ಉಡುಪಿ; ನಗರದ ಮಾರುಥಿ ವೀಥಿಕಾದಲ್ಲಿ ಕುಸಿದುಬಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಪರೀಕ್ಷಿಸಿದ ವೈದ್ಯರು ವ್ಯಕ್ತಿ ಅದಾಗಲೇ ಮೃತಪಟ್ಟಿರುವುದನ್ನು ದೃಢೀಕರಿಸಿದರು. ಮೃತ ವ್ಯಕ್ತಿ ಪಶ್ಚಿಮ ಬಂಗಾಲ, ಕೊಲ್ಕತ್ತಾದ ಸುಜಯ್ ಶೀತಲ್ ಮೆಥಿ (51) ಎಂದು ತಿಳಿದುಬಂದಿದೆ.ಇವರು ಹಲವು ಸಮಯದಿಂದ ಉಡುಪಿಯಲ್ಲಿ ಚಿನ್ನಾಭರಣ ಕುಸುರಿ ಕೆಲಸ ಮಾಡಿಕೊಂಡಿದ್ದರೆಂದು ತಿಳಿದುಬಂದಿದೆ.ಹೆಚ್ಚಿನ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.
