ಪರ್ಕಳದಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿ - ಚಾಲಕ ಪಾರು


ಮಣಿಪಾಲ: ಉಡುಪಿಯ ಪರ್ಕಳ ಕೆನರಾ ಬ್ಯಾಂಕಿನ ತಿರುವಿನಲ್ಲಿ  ಲಾರಿಯೊಂದು ಪಲ್ಟಿಯಾದ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಲಾರಿ ಸಮೀಪದ ಅತ್ರಾಡಿಯಿಂದ ಪೇಪರ್ ಬಾಕ್ಸಗಳನ್ನು ತುಂಬಿಕೊಂಡು ಹುಬ್ಬಳ್ಳಿ ಕಡೆ ಪ್ರಯಾಣ ಬೆಳೆಸಿತ್ತು.ಬೆಳಿಗ್ಗಿನ ಜಾವ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.ರಸ್ತೆತುಂಬ ಚೆಲ್ಲಿದ ರೆಡಿ ಮಿಕ್ಸ ,ಜಲ್ಲಿ ಮಿಶ್ರಣದಿಂದ ಈ ಅವಘಡ ಸಂಭವಿಸಿದೆ.  ಮಣಿಪಾಲದಿಂದ ಹೊರಡುವ ರೆಡಿ ಮಿಕ್ಸರ್ ವಾಹನಗಳು ಎಲ್ಲೆಂದರಲ್ಲಿ ಜಲ್ಲಿ ಮಿಶ್ರಣವನ್ನು ಚೆಲ್ಲುತ್ತಾ ಸಾಗುವುದರಿಂದ ಈ ರಸ್ತೆ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಘಟನೆಯಿಂದಾಗಿ ವಾಹನದ ಡೀಸೆಲ್  ಸೋರಿಕೆಯಾಗಿದ್ದು ಸಂಪೂರ್ಣ ಜಖಂಗೊಂಡಿದೆ.

ಪರ್ಕಳದ ರಸ್ತೆ ಅವ್ಯವಸ್ಥೆ ಪರಿಣಾಮ ವಾಹನಗಳು ಕೆಟ್ಟು ನಿಲ್ಲುವುದು, ಅಪಘಾತಗಳು ನಡೆಯುತ್ತಿರುವುದು ಸರ್ವೇಸಾಮಾನ್ಯವಾಗಿದೆ.ಜನಪ್ರತಿನಿಧಿಗಳು ಶೀಘ್ರ ಹಳೇ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯರಾದ ಗಣೇಶ್ ರಾಜ್ ಮತ್ತಿತರರು ಆಗ್ರಹಿಸಿದ್ದಾರೆ,