ಮಂಗಳೂರು : ವಿದ್ಯಾರ್ಥಿಗಳು ಫೇಲಾದರೆಂಬ ನಿರಾಶಬಾವ ಬಿಟ್ಟು ಇನ್ನೂ ಅವಕಾಶಗಳಿವೆ ಎಂಬ ಆತ್ಮವಿಶ್ವಾಸದಿಂದ ಮತ್ತೊಮ್ಮೆ ಶ್ರಮವಹಿಸಿ ಅಭ್ಯಸಿಸಿದರೆ ಯಶಸ್ಸು ಖಚಿತ .ಕಳೆದ ಮೂರು ದಶಕಗಳಲ್ಲಿ ಫೇಲಾದ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಕಲಿತು ಪಾಸಾಗಿ ಯಶಸ್ವಿಯಾಗಲು ಅದೇ ಪ್ರೇರಣೆ ಎಂದು ನ್ಯಾಷನಲ್ ಗ್ರೂಪ್ ಆಫ್ ಎಜ್ಯುಕೇಶನ್ ನ ಆಡಳಿತ ನಿರ್ದೇಶಕ ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯ ಯು. ಎಚ್. ಖಾಲಿದ್ ಉಜಿರೆ ಹೇಳಿದರು.
32ನೇ ವರ್ಷಕ್ಕೆ ಪಾದಾರ್ಪಣೆಗೈದ ಮಂಗಳೂರಿನ ನ್ಯಾಷನಲ್ ಟ್ಯುಟೋರಿಯಲ್ ಶಿಕ್ಷಣ ಸಂಸ್ಥೆಯ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆಯ ಮುಖ್ಯ ಶಿಕ್ಷಕಿ ವಿದ್ಯಾ ಭಟ್ ಅವರು ಸಂಸ್ಥೆಯಲ್ಲಿ ಇತ್ತೀಚೆಗೆ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಪಾಸಾದವರ ಸಾಧನೆ ವಿವರಿಸಿದರು . ಇಲ್ಲಿ ವಿದ್ಯಾರ್ಜನೆಗೈದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವುದು ಸಂತೋಷದ ವಿಚಾರಎಂದರು.ನಾಡಗೀತೆಯೊಂದಿಗೆ ಆರಂಭವಾದ ಪ್ರಾರಭೋತ್ಸವಕ್ಕೆ ಕಚೇರಿ ವ್ಯವಸ್ಥಾಪಕಿ ಅನಿತಾ ಚೇತನ್ ಸ್ವಾಗತ ನೀಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶುಭಾ ಶರತ್ ರವರು ಧನ್ಯವಾದ ಸಲ್ಲಿಸಿದರು. ರಾಷ್ಟ್ರ ಗೀತೆಯೊಂದಿಗೆ ಸಮಾರಂಭವು ಕೊನೆಗೊಂಡಿತು.
.


