ಪುಣೆ: ಕಳೆದ ಕೆಲವು ದಿನಗಳಿಂದ ದೇಶದ ಹಲವೆಡೆ ಮಂದಗತಿಯಲ್ಲಿದ್ದ ನೈಋತ್ಯ ಮುಂಗಾರು ಮಾರುತಗಳು ಜುಲೈ 1ರ ಬಳಿಕ ಮತ್ತೆ ಚುರುಕುಗೊಳ್ಳಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆ ವರದಿಯ ಪ್ರಕಾರ, ಜೂನ್ 25ರಿಂದ ಜುಲೈ 1ರ ವರೆಗಿನ ಮೊದಲ ವಾರದಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ. ದಕ್ಷಿಣ ಭಾರತ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿ ಉಳಿದೆಡೆ ಮಳೆ ಕೊರತೆ ಇರಲಿದೆ. ಆದರೆ, ಜುಲೈ 2ರಿಂದ ಜುಲೈ 8ರ ವರೆಗಿನ ಎರಡನೇ ವಾರದಲ್ಲಿ ಮುಂಗಾರು ದೇಶದಾದ್ಯಂತ ತೀವ್ರಗೊಳ್ಳಲಿದ್ದು, ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.
