ಭಾರತೀಯ ಸೀರೆ ಮೇಳ: ಮಾರ್ಚ್ 21 ರಿಂದ 23, ಮಣಿಪಾಲ - ಇಂದ್ರಾಳಿ ಸಮೀಪದ ಕಂಚಿಗಾರಗುಳಿ ಕಾಮಾಕ್ಷಿ ದೇವಸ್ಥಾನದಲ್ಲಿ



ಉಡುಪಿ: ನಾರಿಮಣಿಯರಿಗೆ ಸಿಹಿ ಸುದ್ದಿ: ಮಣಿಪಾಲ ಇಂದ್ರಾಳಿ ಸಮೀಪದ ವಿಬುಧಪ್ರಿಯ ನಗರದಲ್ಲಿರುವ ಕಂಚಿಗಾರಗುಳಿ ಶ್ರೀ ಕಾಮಾಕ್ಷಿ ದೇವಸ್ಥಾನದಲ್ಲಿ ಮಾರ್ಚ್ 21 ರಿಂದ 23 ರವರೆಗೆ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಭಾರತೀಯ ಸೀರೆ ಮೇಳ ಜರುಗಲಿದೆ.

ಚಿನ್ನದ ನೂಲಿನಲ್ಲಿ ಕೈ ಮಗ್ಗದ ಸೀರೆ ನೇಯಿಸಿಕೊಂಡ, ಸೀರೆಗಳ ಮಾತೆ ಎಂದು ಸಂಭೋಧಿಸಲ್ಪಡುವ ಕಂಚಿಗಾರಗುಳಿ ಕಾಮಾಕ್ಷಿ ಅಮ್ಮನ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಹಾಗೂ ನೇಕಾರರ ಮೂಲ ಪುರುಷ,  ಆದ್ಯ ವಚನಕಾರ ಜೇಡರ ದಾಸಿಮಯ್ಯ ಜಯಂತಿಯ ಪ್ರಯುಕ್ತ ಭಾರತೀಯ ಸೀರೆ ಮೇಳ ಜರುಗಲಿದೆ.



ಕೈ ಮಗ್ಗದ ನೇಯ್ಗೆ ಪ್ರಾತ್ಯಕ್ಷಿಕೆ ಈ ಮೇಳದ ವಿಶೇಷ ಆಕರ್ಷಣೆಯಾಗಿದೆ. ರಾಜ್ಯ ಹಾಗೂ ದೇಶದ ಬೇರೆ ಬೇರೆ ರಾಜ್ಯಗಳ ಸೀರೆಗಳು, ಶೃಂಗಾರ ಸಾಧನಗಳು, ಗೃಹೋಪಯೋಗಿ, ಕರಕುಶಲ, ಕೃಷಿ, ಆಹಾರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸಣ್ಣ ಉದ್ಯಮಿಗಳನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿ.