ಗಂಗೊಳ್ಳಿ: ಯುವಕ ಹಠಾತ್ ಕುಸಿದು ಬಿದ್ದು ಸಾವು



ಗಂಗೊಳ್ಳಿ: ಇಲ್ಲಿಗೆ ಸಮೀಪದ ಹರ್ಕೂರಿನಲ್ಲಿ ಮನೆಯ ಹಿಂದಿದ್ದ ಸ್ನಾನ ಗೃಹಕ್ಕೆ ಹೋಗುವಾಗ ಹಠಾತ್ ಕುಸಿದು ಬಿದ್ದು ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ಸಂಭವಿಸಿದೆ. ‌

ಹರ್ಕೂರು ಕಟ್ಟಿನಮಕ್ಕಿಯ ನಿವಾಸಿ ಶಶಿಧರ ದೇವಾಡಿಗ (25) ಮೃತ ಯುವಕ. ಇವರು ಬಿಬಿಎ ವ್ಯಾಸಂಗ ಮುಗಿಸಿದ್ದು, ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು.

ಕಳೆದ 4 ವರ್ಷಗಳಿಂದ ವರ್ಕ್ ಪ್ರಮ್ ಹೋಮ್ ನಿಂದಊರಲ್ಲಿಯೇ ಇದ್ದರು. ಮನೆಯ ಹಿಂದಿದ್ದ ಸ್ನಾನ ಗೃಹಕ್ಕೆ ಹೋಗುವಾಗ ಹಠಾತ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅಜ್ಜಿ ಅಕ್ಕಯ್ಯ ಅವರು ಆರೈಕೆ ಮಾಡಿದ್ದು, ಆಗ ತನಗೆ ಉಸಿರು ಕಟ್ಟುತ್ತಿದೆಯೆಂದು ಎದೆ ಹಿಡಿದುಕೊಂಡು ನರಳಾಡುತ್ತಿದ್ದರು.

ಕೂಡಲೇ ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ, ಪರೀಕ್ಷಿಸಿದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಆದರೆ ನಂತರ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾಗಿ ಮೃತರ ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.