ಬ್ರಹ್ಮಾವರ : ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅವರ ಪತ್ನಿ, ನಟಿ ಪ್ರಿಯಾಂಕಾ ಉಪೇಂದ್ರ ಅವರು ಇಂದು ತಮ್ಮ ಕುಟುಂಬ ಸದಸ್ಯರೊಂದಿಗೆ ಕುಲದೇವರಾದ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ದೇವಳಕ್ಕೆ ಬೆಳಿಗ್ಗೆಯೇ ಆಗಮಿಸಿದ ದಂಪತಿ ಮೊದಲು ಶ್ರೀ ದೇವರ ದರ್ಶನ ಪಡೆದು ಕುಟುಂಬ ಸಮೇತರಾಗಿ ವಿಶೇಷ ಅರ್ಚನೆ ಮತ್ತು ಪೂಜೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ದೇವಳದ ವತಿಯಿಂದ ಸ್ವಾಗತ ನೀಡಿ, ಪ್ರಸಾದ ವಿತರಿಸಲಾಯಿತು. ಕುಲದೇವರ ದರ್ಶನವು ಕುಟುಂಬದ ಪರಂಪರೆಯ ಭಾಗವಾಗಿದ್ದು, ವಿಶೇಷ ಸಂದರ್ಭಗಳಲ್ಲಿ ದೇವಳಕ್ಕೆ ಭೇಟಿ ನೀಡುವುದು ತಮ್ಮ ಸಂಪ್ರದಾಯ ಎಂದು ಉಪೇಂದ್ರ ತಿಳಿಸಿದರು. ದೇವರ ಆಶೀರ್ವಾದವನ್ನು ಪಡೆದು ಕುಟುಂಬ ಸಮೇತರಾಗಿ ಕೆಲವು ಕ್ಷಣಗಳು ದೇವಳ ಆವರಣದಲ್ಲಿ ಕಳೆದರು.
ದಂಪತಿ ಆಗಮನದ ಸುದ್ದಿ ತಿಳಿದ ಸ್ಥಳೀಯ ಭಕ್ತರು ಹಾಗೂ ಅಭಿಮಾನಿಗಳು ದೇವಳದ ಬಳಿ ಸೇರಿ ಸಂತಸ ವ್ಯಕ್ತಪಡಿಸಿದರು.
