ಉಡುಪಿ:ಜಿಲ್ಲೆಯಾದ್ಯಂತ ಸಂವಿಧಾನ ಪೀಠಿಕೆ ಭಾವಚಿತ್ರ ಅಳವಡಿಸುವ ಅಭಿಯಾನ : ಸಂಗೊಳ್ಳಿ ಸೋಮಣ್ಣ

ಸುದ್ದಿಗೋಷ್ಠಿ

ಉಡುಪಿ : ರಾಜ್ಯಾದ್ಯಂತ ಸಹಕಾರ ಇಲಾಖೆ ಅಡಿಯಲ್ಲಿ ಬರುವ ಎಲ್ಲಾ ಸಹಕಾರ ಸಂಘಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಸರ್ಕಾರದ ಆದೇಶದಂತೆ ಸಂವಿಧಾನ ಪೀಠಿಕೆ ಭಾವಚಿತ್ರವನ್ನು ಅಳವಡಿಸುವ ಅಭಿಯಾನವನ್ನು  ಸುಭಾಸ್ ಚಂದ್ರಬೋಸ್‌ ಸೇವಾ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದೆ. ಅದರ ಭಾಗವಾಗಿ ಉಡುಪಿ ಜಿಲ್ಲೆಯಲ್ಲೂ  ಫಲಕ ಅಳವಡಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಸಂಗೊಳ್ಳಿ ಸೋಮಣ್ಣ ತಿಳಿಸಿದರು.

ಅವರು ಇಂದು ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಒಂದು ವರ್ಷದಿಂದ ಆರಂಭವಾದ ಈ ಅಭಿಯಾನ ಈಗಾಗಲೇ 27 ಜಿಲ್ಲೆಗಳನ್ನು ಪೂರ್ಣಗೊಳಿಸಲಾಗಿದ್ದು, ಇಂದಿನಿಂದ ಉಡುಪಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೂ ಭೇಟಿ ನೀಡಿ ಸಂವಿಧಾನ ಪೀಠಿಕೆ ಫಲಕವನ್ನು ಅಳವಡಿಸುವುದಾಗಿ ತಿಳಿಸಿದರು.

ಈ ಸಂಬಂಧ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ  ಅವರು ಸಂವಿಧಾನ ಪೀಠಿಕೆಯ ಫಲಕವನ್ನು ಅನಾವರ ಣಗೊಳಿಸಿದ್ದಾರೆ. 2022 ರಿಂದಲೇ ಕೆಂದ್ರಸರ್ಕಾರ ನಮ್ಮಸೇವಾ ಸಂಸ್ಥೆಗಳಿಗೆ ಸಂವಿಧಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಂವಿಧಾನ ಪೀಠಿಕೆ ಅಳವಡಿಸಲು ಆದೇಶಿಸಿದ್ದು, ಈಗ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದೇಶ ಪತ್ರವನ್ನು ನೀಡಿದ್ದಾರೆ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಅಭಿಯಾನಕ್ಕೆ ಚಾಲನೆ ನೀಡಿಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಯೋಜಕರು ವಿದ್ಯಾ ಲಕ್ಷ್ಮೀ ,ತಾಲೂಕು ಸಂಯೋಜಕರು ಪಾರ್ಥಸಾರಥಿ ,ಕಾರ್ಯದರ್ಶಿ ವನಿತಾ ,ಅಶ್ವಿನಿ ,ಸುಮಾ ಆಚಾರ್ ಬೈಂದೂರು ಉಪಸ್ಥಿತರಿದ್ದರು.