ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಶ್ರೀಮನ್ನಾಗಮಂಡಲ : ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ



ಮುನಿಯಾಲು: ಪ್ರಕೃತಿಯಿಂದ ಪ್ರಕೃತಿಗೆ ಎಂಬ ವಿನೂತನ ಪರಿಕಲ್ಪನೆಯಲ್ಲಿ‌ ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆಬ್ರವರಿ ೨೧ ರ ತನಕ ನಡೆಯುವ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆಯುವ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಗುರುವಾರ ಭಕ್ತಿ ವೈಭವದ ಚಾಲನೆ ನೀಡಲಾಯಿತು.  ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ. ಜಿ ರಾಮಕೃಷ್ಣ ಆಚಾರ್ ಮತ್ತು ಕುಟುಂಬಸ್ಥರು ವಿದ್ವಾನ್‌ ಕೊರಂಗ್ರಪಾಡಿ ಕುಮಾರಗುರು ತಂತ್ರಿಗಳ ಸಹಿತ ಋತ್ವಿಜರನ್ನು ಸ್ವಾಗತಿಸಿದರು. ೬ ಕಾಯಿ ಗಣಯಾಗ, ಉಗ್ರಾಣ ಮುಹೂರ್ತ, ಅನ್ನಾರಾಧನ ಮುಹೂರ್ತ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳು ವಿದ್ವಾನ್‌ ಕೊರಂಗ್ರಪಾಡಿ ಕುಮಾರಗುರು ತಂತ್ರಿಗಳ ನೇತ್ರತ್ವದಲ್ಲಿ ವಾಸುದೇವ ಭಟ್‌ ಅವರ ಸಹಯೋಗದಲ್ಲಿ ನಡೆಯಿತು. 

ಫೆಬ್ರವರಿ 19ರ ಗುರುವಾರ ಋತಿಜ್ವರ ಸ್ವಾಗತ,  ಋತಿಗ್ವರಣ, ಫಲನ್ಯಾಸ-ಪ್ರಾರ್ಥನೆ, ಆದ್ಯಶುದ್ಧಿ- ಪುಣ್ಯಾಹ, ಮಾತೃಕಪೂಜನಮ್, ನಾಂದೀಸಮಾರಾಧನ್, ಸಪ್ತರ್ಷಿ ಪೂಜನಮ್, ಅರಣಿಮಥನ, ಬ್ರಹ್ಮ ಕೂರ್ಚ ಹೋಮ, 6 ಕಾಯಿ ಗಣಯಾಗ, ನವಗ್ರಹ ಯಾಗ, ಪ್ರತಿಸರಬಂಧಪೂರ್ವಕ ಕಂಕಣಬಂಧನ, ಶ್ರೀಮದ್ ಭಾಗವತ ಪಾರಾಯಣರಂಭ, ಉಗ್ರಾಣ ಮುಹೂರ್ತ, ಅನ್ನರಾಧನ ಉಗ್ರಾಣ ಮುಹೂರ್ತ, ಅಂಕೂರ ಪೂಜೆ, ಸಪ್ತಶುದ್ಧಿ, ಭೂ ಶುದ್ದಿ, ವಾಸ್ತು ವಿದ್ಯಾ ಕಲಪ, ರಾಕ್ಷೋಘ್ನಸೂಕ್ತಯಾಗ, ಪ್ರಕಾರ ಬಲಿ ನಡೆಯಿತು.

ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ. ಜಿ ರಾಮಕೃಷ್ಣ ಆಚಾರ್, ಸವಿತಾ ಆರ್‌ ಆಚಾರ್‌, ಅನುಷಾ ಆಚಾರ್‌, ಪ್ರಜ್ವಲ್‌, ಆಚಾರ್‌, ಪೂಜಾ ಆಚಾರ್‌, ತೇಜಸ್‌ ಆಚಾರ್‌, ರಕ್ಷತ್‌ ಆಚಾರ್‌, ಹಾಗೂ ಕುಟುಂಬಸ್ಥರು, ಶ್ರೀಮನ್ನಾಗಮಂಡಲ ಸೇವಾ ಸಮಿತಿಯ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ ಶೆಟ್ಟಿ ಕಾರ್ಕಳ, ದಾಮೋಧರ ಶರ್ಮ ಬಾರ್ಕೂರು, ಅರವಿಂದ ಆಚಾರ್ಯ ಬೆಳುವಾಯಿ, ಪ್ರಭಾಕರ ಆಚಾರ್ಯ ಗುಡ್ಡೆಯಂಗಡಿ, ಮಾರ್ಗದರ್ಶಕರಾದ ಸುಕೇಶ ಹೆಗ್ಡೆ ಕಡ್ತಲ, ಮುನಿಯಾಲು ದಿನೇಶ ಪೈ, ಸಂತೋಷ ಆಮೀನ್‌, ಜ್ಯೋತಿ ಹರೀಶ್‌, ನಾಗಪ್ಪಯ್ಯ ಆಚಾರ್ಯ ಗುಜ್ಜಾಡಿ, ಪ್ರಮುಖರಾದ ಡಾ.ಹರೀಶ ಆಚಾರ್ಯ ಜಲಕದಕಟ್ಟೆ ಮಂಗಳೂರು, ಉಪೇಂದ್ರ ಆಚಾರ್ಯ ಪೆರ್ಡೂರು, ಡಾ.ಕೆ.ಸುದರ್ಶನ್‌ ಹೆಬ್ಬಾರ್‌ ಮುನಿಯಾಲು, ಗೋಪಿನಾಥ ಭಟ್‌ ಮುನಿಯಾಲು, ಬೆಳುವಾಯಿ ಸೀತಾರಾಮ ಆಚಾರ್ಯ, ಸಮಿತಿಯ ಸದಸ್ಯರು,ಪದಾಧಿಕಾರಿಗಳು, ಗಣ್ಯರು, ಪ್ರಮುಖರು, ಸಂಘಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.

20 ರ ಶುಕ್ರವಾರ ಮೃತ್ಯುಂಜಯ ಹೋಮ, ಕೂಷ್ಮಂಡಯಾಗ, ಭೂತನಾಥ ಪ್ರಿತೀಕರ ಪ್ರತ್ಯಕ್ಷ ಅಶ್ವಪೂಜಾ, ಪ್ರಸನ್ನ ಪೂಜೆ, ಸಾನ್ನಿಧ್ಯಾರ್ಥ ನೂರುಂಪಾಲುಮ್, ಚಕ್ರಬ್ಜಮಂಡಲ ಪೂಜಾ, ಭದ್ರಕ ಮಂಡಲ ಪೂಜೆ ನಡೆಯಲಿದೆ.

ಫೆಬ್ರವರಿ 21ರ ಶನಿವಾರ  ಆಶ್ಲೇಷ ಬಲಿದಾನ, ಪಂಚ ವಿಂಶತಿ ದ್ರವ್ಯ ಮಿಳಿತ ಕಲಶ, ಪ್ರಧಾನಯಾಗ, ಸರ್ಪತ್ರಯ ಮಂತ್ರ ಯಾಗ, ಪವಮಾನ ಸೂಕ್ತಯಾಗ, ತಿಲಯಾಗ,  ಬ್ರಹ್ಮಚಾರಿ ಆರಾಧನೆ, ಪ್ರಸನ್ನ ಪೂಜೆ, ಪಲ್ಲಪೂಜೆ, ಅನ್ನರಾದನೆ, ದುರ್ಗ ನಮಸ್ಕಾರ, ಹಾಲಿಟ್ಟು ಸೇವೆ, ಏಕ ಪವಿತ್ರ ಶ್ರೀಮನ್ನಾ ನಾಗಮಂಡಲ ಸೇವೆ, ಅನುಗ್ರಹ ವಾಕ್ಯ ಪ್ರಧಾನ, ಪ್ರಸಾದ ವಿತರಣೆ, ಪ್ರಸನ್ನ -ಉತ್ತರ ಪೂಜೆ, ಮಹಾ ಅನ್ನಸಂತರ್ಪಣೆ ಜರುಗಲಿದೆ.