ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಗೆ ಗೋವಿಂದ ಬಾಬು ಪೂಜಾರಿ ಅವರ ಕಚೇರಿಯಲ್ಲಿ ಸನ್ಮಾನ - ಗೌರವ

ಗುರೂಜಿಗೆ ಸನ್ಮಾನ

ರಾಜಕೀಯ ಮುಖಂಡ ಮತ್ತು ಸಮಾಜಸೇವಕ ಗೋವಿಂದ ಬಾಬು ಪೂಜಾರಿ ಅವರ ಕಚೇರಿಗೆ ಇಂದು ಶಂಕರಪುರ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಭೇಟಿ ನೀಡಿದರು.ಈ ಸಂದರ್ಭ ಗೋವಿಂದ ಬಾಬು ಪೂಜಾರಿ ಅವರು ಗುರೂಜಿಯನ್ನು ಆತ್ಮೀಯವಾಗಿ ಸನ್ಮಾನಿಸಿದರು. ಇದೇ ವೇಳೆ ಗುರೂಜಿ ಅವರು ಗೋವಿಂದ ಬಾಬು ಪೂಜಾರಿ ಅವರಿಗೆ ಗೌರವ ಅರ್ಪಣೆ ಮಾಡಿದರು.ಈ ಸಂದರ್ಭ ಬೆಂಗಳೂರು ಬಿಲ್ಲವ ಸಂಘದ ಉಪಾಧ್ಯಕ್ಷೆ ಜಲಜ ಶೇಖರ್ ಪೂಜಾರಿ , ,ಸಮಾಜಸೇವಕಿ ದೀಪಾ ನಾಯಕ್ , ಬಿಜೆಪಿ ನಾಯಕಿ ಮತ್ತು ಬಿಲ್ಲವ ಮುಖಂಡರಾದ ಗೀತಾಂಜಲಿ ಸುವರ್ಣ ಮತ್ತು ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.