ಉಡುಪಿ: ಮಲ್ಪೆ ಠಾಣಾ ವ್ಯಾಪ್ತಿಯ ಮೂಡು ಬೆಟ್ಟಿನ ಚಂದ್ರಕಟ್ಟಾ ಬಳಿ ನೆಲವನ್ನು ವಿದ್ಯುತ್ ಪ್ರೆಷರ್ ಪಂಪ್ ಮೂಲಕ ತೊಳೆಯುತ್ತಿದ್ದ ವ್ಯಕ್ತಿ ಕುಸಿದು ಬಿದ್ದ ಸ್ಥಿತಿಯಲ್ಲಿ ಇದ್ದು ಕೂಡಲೇ ವಿಶು ಶೆಟ್ಟಿ ಅಂಬಲಪಾಡಿಯವರು ಆಂಬುಲೆನ್ಸ್ ಮುಖಾಂತರ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಪರೀಕ್ಷಿಸಿದ ವೈದ್ಯರು ವ್ಯಕ್ತಿಯು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ವಿದ್ಯುತ್ ಪ್ರವಹಿಸಿ ಮೃತಪಟ್ಟ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿ ಶಿವಶಂಕರ್ (50), ಕೊಡವೂರಿನ ಮದ್ವನಗರ ಬಳಿಯ ನಿವಾಸಿಯಾಗಿದ್ದು ಅವಿವಾಹಿತರು. ಸಂಬಂಧಿಕರ ಮನೆಯ ಸ್ವಚ್ಛತಾ ಕೆಲಸಕ್ಕೆ ತೆರಳಿದ್ದು ವಿದ್ಯುತ್ ಪ್ರೆಷರ್ ಪಂಪ್ ನಲ್ಲಿ ವಿದ್ಯುತ್ ಪ್ರವಹಿಸಿದ್ದು ನೀರಿನಲ್ಲಿ ನಿಂತಿರುವುದರಿಂದ ತೀವ್ರ ವಿದ್ಯುತ್ ಆಘಾತವಾಗಿರಬಹುದು ಎಂಬ ಶಂಕೆಯಿದೆ. ಮೃತರು ಕೃಷಿಕರಾಗಿದ್ದರು. ಈ ಬಗ್ಗೆ ಸಮಾಜಸೇವಕ ವಿಶು ಶೆಟ್ಟಿ ಮಲ್ಪೆ ಠಾಣೆಗೆ ಮಾಹಿತಿ ನೀಡಿದ್ದಾರೆ.