ಟಿಪ್ಪರ್ ಗಳ ಆಟಾಟೊಪಕ್ಕೆ ಬ್ರೇಕ್ - ಜಿಲ್ಲೆಯಲ್ಲಿ ಮರಳು ಸಾಗಾಟ ವಾಹನಗಳಿಗೆ ಇನ್ನು ಮುಂದೆ ವೇಗ ನಿಯಂತ್ರಕ ಕಡ್ಡಾಯ



ಉಡುಪಿ: ಆರು ಚಕ್ರ ಮತ್ತು ಅದಕ್ಕಿಂತ ಹೆಚ್ಚಿನ ಚಕ್ರಗಳನ್ನು ಹೊಂದಿರುವ  ಮರಳು , ಕೆಂಪುಕಲ್ಲು ಮತ್ತಿತರ ಸಾಮಗ್ರಿ ಸಾಗಾಟದ ವಾಹನಗಳು ಇನ್ನು‌ ಮುಂದೆ ಕಡ್ಡಾಯವಾಗಿ ವೇಗ ನಿಯಂತ್ರಕ ಅಳವಡಿಸಬೇಕು ಎಂದು ಸೂಚನೆ ನೀಡಲಾಗಿದೆ.

ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಉಡುಪಿ ಎಸ್ಪಿ ಹರಿರಾಂ ಶಂಕರ್ ಅವರು ತಿಳಿಸಿದ್ದಾರೆ. 

ವೇಗ ನಿಯಂತ್ರಕವು 60 ಕಿ.ಮೀ. ವೇಗಕ್ಕೆ ಸೀಮಿತವಾಗಿರಬೇಕು. ಜಿಲ್ಲೆಯಲ್ಲಿ ಟಿಪ್ಪರ್ ಗಳ ಆಟಾಟೋಪಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದಲೇ ಈ ಸಭೆಯನ್ಬು ಕರೆಯಲಾಗಿತ್ತು.ವೇಗ ನಿಯಂತ್ರಕ ಅಳವಡಿಕೆಗೆ 10 ದಿನಗಳ ಗಡುವನ್ನೂ ನೀಡಲಾಗಿದೆ.ಈ ಸಂಬಂಧ ಎಲ್ಲ ಲಾರಿ -  ಟಿಪ್ಪರ್   ಚಾಲಕ ಮಾಲಕರಿಗೆ ಪ್ಯಾಂಪ್ಲೆಟ್ ಗಳನ್ನು ಹಂಚಲಾಗುವುದು.ಅದೇ ರೀತಿ ಜನವರಿ 20 ರ ಒಳಗೆ ಎಲ್ಲ ಬಸ್ ಗಳೂ  ಕಡ್ಡಾಯವಾಗಿ ಬಾಗಿಲುಗಳನ್ನು ಅಳವಡಿಸಿಕೊಳ್ಳಬೇಕು. ತಪ್ಪಿದಲ್ಲಿ ದಂಡ ಸಹಿತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಅವರು ತಿಳಿಸಿದ್ದಾರೆ.