ಅಖಿಲ ಭಾರತ ಸಂತ ಸಮಿತಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಆಯ್ಕೆ

ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ

ಶಂಕರಪುರ: ಅಖಿಲ ಭಾರತ ಸಂತ ಸಮಿತಿಯ ಮುಖ್ಯ ನಿರ್ದೇಶಕರಾದ ಶ್ರೀ ಮಹಾಂತ ಜ್ಞಾನದೇವ್ ಸಿಂಗ್ ಜಿ ಅವರ ಒಪ್ಪಿಗೆಯೊಂದಿಗೆ ಮತ್ತು ಅಧ್ಯಕ್ಷರು ಜಗದ್ಗುರು ಆಚಾರ್ಯ ಶ್ರೀ ಅವಿಚಲ ದೇವಾಚಾರ್ಯ ಜಿ ಅವರ ಆದೇಶದಂತೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಜಿತೇಂದ್ರನಂದ ಸರಸ್ವತಿಯವರು 2025 ಡಿಸೆಂಬರ್  15/16 ರಂದು ನಾಸಿಕ್ ಕುಂಭಮೇಳದ ವಿಶೇಷ ಅಧಿವೇಶನದಲ್ಲಿ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಅವರನ್ನು  ಕರ್ನಾಟಕ  ಅಖಿಲ ಭಾರತ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ಮುಂದುವರಿಸುವಂತೆ ಘೋಷಿಸಿದ್ದಾರೆ.